*ನುಗ್ಗಿ ಹೊಡೆಯುತ್ತಿದ್ದೇವೆ ಉಗ್ರಗಾಮಿ ಪಾಕ್ ಗೆ, ಚೀನಾಕ್ಕೂ ಇಟ್ಟಿದ್ದೇವೆ ಚೆಕ್ ಮೇಟ್; ಪ್ರಹ್ಲಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಉಗ್ರಗಾಮಿ ಕೇಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದವರ ಮನೆಗೇ ನುಗ್ಗಿ ಹೊಡೆ ಯುತ್ತಿದ್ದೇವೆ. ಕಾಲು ಕೆದರಿ ಬರುತ್ತಿದ್ದ ಚೀನಾಕ್ಕೂ ಪ್ರತ್ಯುತ್ತರ ಕೊಡುತ್ತಿದ್ದೇವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದಲ್ಲಿ ಹೊನಲು ಬೇಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಆರ್ಟಿಕಲ್ 370ನ್ನು ತೆಗೆದು ಹಾಕಿದ್ದೇವೆ. ಈ ಮೂಲಕ ಉಗ್ರರ ಚಟುವಟಿಕೆ ಸಂಪೂರ್ಣ ಹತ್ತಿಕ್ಕಲಾಗಿದೆ ಎಂದು ಹೇಳಿದರು.
ಈ ಮೊದಲು ಬೆಂಗಳೂರು, ಹೈದರಾಬಾದ್ನಲ್ಲಿ ಬಾಂಬ್ ಸದ್ದು ಮಾಡುತ್ತಿತ್ತು. ಈಗ ಅದರ ಸದ್ದಡಗಿದೆ. ಆರ್ಟಿಕಲ್ 370ನ್ನು ತೆಗೆದು ಹಾಕಿ ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಹೇಳಿದರು.
ಮೋದಿ ಆಡಳಿತದಲ್ಲಿ ಭಾರತ ಸಶಕ್ತ: ಆರ್ಟಿಕಲ್ 370 ನ್ನು ಕಿತ್ತೆಸೆದ ಬಳಿಕ ಬಾಂಬ್ ಸ್ಫೋಟ ಸದ್ದು ಮಾಡದೆ ಓಡಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೇ ನುಗ್ಗಿ ಹೊಡೆಯುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಅಷ್ಟು ಸಶಕ್ತವಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದಿಸಿದರು.
ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯೇ? ಎಂದು ಪ್ರಶ್ನಿಸಿದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ತೆಗೆದುಹಾಕಿದ್ದೇ ಇದಕ್ಕೆಲ್ಲ ಕಾರಣ ಎಂದು ಹೇಳಿದರು.
ಆರ್ಟಿಕಲ್ 370 ಕಿತ್ತೆಸೆದ ಪ್ರಧಾನಿ ಮೋದಿ ಅವರಿಗೆ 370 ಸೀಟು ಕೊಡಿ:
ದೇಶದಲ್ಲಿ ಆರ್ಟಿಕಲ್ 370ಯನ್ನು ಕಿತ್ತೆಸೆದ ಪ್ರಧಾನಿ ಮೋದಿ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ. ಬಿಜೆಪಿಯ 370 ಸೀಟುಗಳನ್ನು ತಂದುಕೊಡಿ. ಇದೇ ಮೋದಿಜಿಗೆ ಕೊಡುವ ಗಿಫ್ಟ್ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ