Kannada NewsKarnataka NewsLatestPolitics

*ಕಾಂಗ್ರೆಸ್ ಗೆ PM ಪದದ ಅಲರ್ಜಿ; ಯೋಜನೆಗಳಿಗೆ PM ಬದಲು ಕುಟುಂಬದ ಹೆಸರಿಟ್ಟಿದೆ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷಕ್ಕೆ “PM” ಪದದ ಬಗ್ಗೆ ಅಲರ್ಜಿ ಇದೆ. ಹಾಗಾಗಿ ಅವರು ಯಾವುದೇ ಯೋಜನೆಗೆ ಪ್ರಧಾನಿ ಪದ ಸೇರಿಸಲಿಲ್ಲ. ಬದಲಾಗಿ ಕುಟುಂಬದ ಹೆಸರನ್ನು ಸೇರಿಸಿದ್ದಾರೆ ಎಂದು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.

ಸಂಸತ್ ಭವನದಲ್ಲಿ ಇಂದು17ನೇ ಲೋಕಸಭೆ ಕೊನೆಯ ಅಧಿವೇಶನದಲ್ಲಿ ಮಾತನಾಡಿ, ಕಾಂಗ್ರೆಸ್‌ಗೆ ಪಿಎಂ ಪದದ ಅಲರ್ಜಿ ಇದೆ ಎಂದು ಹೇಳಿದರು.

ಕಾಂಗ್ರೆಸ್ ನವರು ತಮ್ಮ ಯಾವುದೇ ಯೋಜನೆಯಲ್ಲಿ ಪ್ರಧಾನಿ ಪದವನ್ನು ಸೇರಿಸಲಿಲ್ಲ. ಬದಲಾಗಿ ಅವರು ಒಂದೇ ಕುಟುಂಬದ ಹೆಸರನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ದೇಶದ ನಾಯಕ. ಪ್ರಧಾನಿ ಪದದ ಮಹತ್ವವನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಜೋಶಿ ಸಲಹೆ ನೀಡಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button