Belagavi NewsBelgaum NewsKannada NewsKarnataka News

*ಸೋಂದಾ ಶ್ರೀಗಳಿಗೆ `ಗೀತಾಭಿಯಾರ್ಣವ’ ಬಿರುದು* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದಲ್ಲಿ ಮಂಗಳವಾರ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು, ಸೋಂದಾ  ಮಹಾಸ್ವಾಮಿ  ಇವರಿಗೆ ಗೀತಾಭಿಯಾರ್ಣವ ಬಿರುದಾಂಕಿತ ಸಮರ್ಪಣಾ ಸಮಾರಂಭ ಡಿ.19 ಮಂಗಳವಾರದಂದು ಬೆಳಗ್ಗೆ 11ಗಂಟೆಗೆ ನಡೆಯಲಿದೆ.

ಸಮಾರಂಭದ ಸಾನಿದ್ಯವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಹಿಸಲಿದ್ದಾರೆ. ಹುಕ್ಕೇರಿ ಹಿರೇಮಠದ ಸಂಸ್ಥಾನದಿಂದ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಪೀಠಾಧೀಶರಿಗೆ ಗೀತಾಭಿಯಾರ್ಣವ ಬಿರುದಾಂಕಿತವನ್ನು ಸಮರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 150 ವೇಧ ವಟುಗಳು ಹಾಗೂ 50 ಜನ ಮಹಿಳೆಯರು ಒಟ್ಟಿಗೆ ಗೀತಾ ಪಾರಾಯಣ ಮಾಡಲಿದ್ದಾರೆ. 

ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಸಿರು ಕ್ರಾಂತಿಯನ್ನು ಮಾಡುವುದರ ಜೊತೆಗೆ ಭಗವದ್ ಗೀತಾ ಅಭಿಯಾನವನ್ನು ಇಡೀ ಕರ್ನಾಟಕದ ತುಂಬ ಮಾಡಿದ್ದನ್ನು ಸ್ಮರಿಸಬಹುದು.

Home add -Advt

Related Articles

Back to top button