Karnataka News

ನಕಲಿ ಗನ್‍ನಿಂದ ಬೆದರಿಸಲು ಬಂದವನಿಗೆ ಅಸಲಿ ಗನ್‍ನಿಂದ ಗುಂಡೇಟು

ಪ್ರಗತಿ ವಾಹಿನಿ ಸುದ್ದಿ, ಟೆಕ್ಸಾಸ್: ನಕಲಿ ಗನ್ ತೋರಿಸಿ ಬೆದರಿಸಿ ಹೊಟೇಲ್‍ನಲ್ಲಿ ಹಣ ದೋಚಲು ಮುಂದಾದ ಕಳ್ಳನಿಗೆ ಹೊಟೇಲ್ ಗ್ರಾಹಕನೊಬ್ಬ ತನ್ನಲ್ಲಿದ್ದ ಅಸಲಿ ಗನ್‍ನಿಂದ ಶೂಟ್ ಮಾಡಿ ಕೊಂದು ಹಾಕಿದ್ದಾನೆ.

 

Home add -Advt

ಅಮೇರಿಕದ ಟೆಕ್ಸಾಸ್‍ನ ಹೊಟೇಲ್ ಒಂದರಲ್ಲಿ ಈ ಅವಘಡ ನಡೆದಿದೆ.
ಹೊಟೇಲ್ ಒಳಗೆ ಪ್ರವೇಶಿಸಿದ ಕಳ್ಳ ತನ್ನ ನಕಲಿ ಗನ್ ಝಳಪಿಸಿ ಹಣ ಕೊಡುವಂತೆ ಗ್ರಾಹಕರನ್ನು ಬೆದರಿಸಿದ್ದಾನೆ. ಈ ವೇಳೆ ಮಿಂಚಿನ ವೇಗದಲ್ಲಿ ತನ್ನಲ್ಲಿದ್ದ ಗನ್ ತೆಗೆದ ಗ್ರಾಹಕನೊಬ್ಬ ಸತತ ಏಳು ಬಾರಿ ಕಳ್ಳನ ಮೇಲೆ ಗುಂಡು ಹಾರಿಸಿದ್ದಾನೆ.

 

ಕಳ್ಳ ನೆಲಕ್ಕೆ ಬಿದ್ದ ಮೇಲೂ ಬಿಡದೆ ಮತ್ತೆರಡು ಬಾರಿ ಆತನತ್ತ ಶೂಟ್ ಮಾಡಿದ್ದಾನೆ.
ಘಟನೆಯ ಬಳಿಕ ಅಸಲಿ ಗನ್ ದಾರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

 

ಪೊಲೀಸರು ತನಿಖೆ ನಡೆಸಲಾಗಿ ಕಳ್ಳನ ಕೈಯ್ಯಲ್ಲಿದ್ದಿದ್ದು ನಕಲಿ ಪ್ಲಾಸ್ಟಿಕ್ ಗನ್ ಎಂಬುದು ಪತ್ತೆಯಾಗಿದೆ. ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಶೂಟ್ ಮಾಡಿದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.

‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಬ್ರೇಕ್

https://pragati.taskdun.com/siddu-nija-kanasugalubook-releasebangalore-courtstay-orderdr-yatindra-siddaramaiah/

Related Articles

Back to top button