Karnataka News

ಪಾಕಿಸ್ತಾನದ ನಟಿಯ ಜತೆ ಶಾರುಕ್ ಪುತ್ರನ ಹೆಸರು !

ಪ್ರಗತಿ ವಾಹಿನಿ ಸುದ್ದಿ, ಮುಂಬೈ: ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಹೆಸರು ಇತ್ತೀಚೆಗೆ ಪಾಕಿಸ್ತಾನಿ ನಟಿಯರ ಜತೆ ತಳಕು ಹಾಕಿಕೊಳ್ಳುತ್ತಿದೆ.

 

Home add -Advt

ಈ ಮೊದಲು ಪಾಕ್ ನಟಿ ನಾದಿಯಾ ಫತೇಹಿ ಜತೆ ಆರ್ಯನ್ ಖಾನ್ ಡೇಟಿಂಗ್ ನಡೆಸುತ್ತಿದ್ದ ಬಗ್ಗೆ ಸುದ್ದಿ ಹರಡಿತ್ತು.
ಈಗ ಪಾಕಿಸ್ತಾನದ ಇನ್ನೊಬ್ಬ ಖ್ಯಾತ ನಟಿ ಸಾದಿಯಾ ಖಾನ್ ಜತೆ ಆರ್ಯನ್ ಖಾನ್ ಪಾರ್ಟಿಯೊಂದರಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ.

 

ಹೊಸ ವರ್ಷಾಚರಣೆ ಸಂದರ್ಭದಲ್ಲಿ ದುಬೈನಲ್ಲಿ ನಡೆದ ಪಾರ್ಟಿಯೊಂದರ ಫೋಟೊಗಳು ಇದಾಗಿದ್ದು ಸ್ವತಃ ಸಾದಿಯಾ ಖಾನ್ ಈ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

ಚಿತ್ರದಲ್ಲಿ ಸಾದಿಯಾ ಖಾನ್ ಕಪ್ಪು ಬಣ್ಣದ ಉಡುಗೆ ತೊಟ್ಟಿದ್ದರೆ ಆರ್ಯನ್ ಖಾನ್ ಮರೂನ್ ಬಣ್ಣದ ಟಿ ಶರ್ಟ್ ಮೇಲೆ ಬಿಳಿ ಬಣ್ಣದ ಜಾಕೆಟ್ ಧರಿಸಿದ್ದು ನೀಲಿ ಡೆನಿಮ್ ಜೀನ್ಸ್ ತೊಟ್ಟಿದ್ದಾರೆ.
ಆದರೆ ಸಾದಿಯಾ ಖಾನ್ ಇನ್ಸ್ಟಾಗ್ರಾಂನಲ್ಲಿ ಫೋಟೊ ಪೋಸ್ಟ್ ಮಾಡಿ 24 ಗಂಟೆಯಲ್ಲಿ ಅದು ಡಿಲೀಟ್ ಆಗಿದೆ.

*BREAKING NEWS: ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ: ಸಿದ್ದರಾಮಯ್ಯ ಅಧಿಕೃತ ಘೋಷಣೆ*

https://pragati.taskdun.com/vidhanasabha-election-2023siddaramiahkolaracontestannounce/

Related Articles

Back to top button