Karnataka News

98 ವರ್ಷದ ಕೈದಿಗೆ ಜೈಲಿನಲ್ಲಿ ಬೀಳ್ಕೊಡುಗೆ

ಪ್ರಗತಿ ವಾಹಿನಿ ಸುದ್ದಿ, ಅಯೋಧ್ಯಾ: ಅಯೋಧ್ಯಾದ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಹೊಂದಿದ 98ರ ವಯೋವೃದ್ಧ ಕೈದಿಗೆ ಜೈಲಿನ ಅಧೀಕ್ಷಕರು ಮತ್ತು ಅಧಿಕಾರಿಗಳು ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದು ಗಮನ ಸೆಳೆದಿದೆ.

ರಾಮಸೂರತ್ (98) ಅವರಿಗೆ ಐಪಿಸಿ ಸೆಕ್ಷನ್ 452,323 ಮತ್ತು 352ರ ಅನ್ವಯ ಶಿಕ್ಷೆ ವಿಧಿಸಲಾಗಿತ್ತು. ಕಳೆದ 5 ವರ್ಷಗಳಿಂದ ಅವರು ಅಯೋಧ್ಯಾದ ಕಾರಾಗೃಹದಲ್ಲಿದ್ದರು.

Home add -Advt

ಸೋಮವಾರ ಅವರು ಬಿಡುಗಡೆಗೊಂಡರೂ ಅವರ ಕುಟುಂಬದವರು ಒಬ್ಬರೂ ಸಹ ಕರೆದುಕೊಂಡು ಹೋಗಲು ಬಂದಿರಲಿಲ್ಲ.

 

ಆದರೆ ಮಾನವೀಯತೆ ಮೆರೆದ ಜೈಲಿನ ಅಧೀಕ್ಷಕ ಶಂಕರಕಾಂತ ಮಿಶ್ರಾ ಮತ್ತು ಇತರ ಅಧಿಕಾರಿಗಳು ರಾಮಸೂರತ್ ಅವರಿಗೆ ಜೈಲಿನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಿ ಗೌರವಿಸಿದರು. ಬಳಿಕ ಜೈಲಿನ ಜೀಪ್‍ನಲ್ಲೇ ರಾಮಸೂರತ್ ಅವರನ್ನು ಅವರ ಗ್ರಾಮಕ್ಕೆ ಬಿಟ್ಟು ಬರಲಾಗಿದೆ.

*ಸ್ಯಾಂಟ್ರೋ ರವಿ ವಿರುದ್ಧ EDಗೆ ದೂರು*

https://pragati.taskdun.com/santro-ravied-complaint-filemysore-odanadi/

Related Articles

Back to top button