Latest

*ಕಾಂಗ್ರೆಸ್ ನವರದ್ದು ಓಡುವ ಬಸ್ ಅಲ್ಲ; ದೂಡುವ ಬಸ್; ಪ್ರಜಾಧ್ವನಿ ಯಾತ್ರೆ ಶೋಕ ಯಾತ್ರೆ; ಬಿಜೆಪಿ ನಾಯಕರ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿರುವ ಕಾಂಗ್ರೆಸ್ ವಿರುದ್ಧ ಸಚಿವ ಅಶ್ವತ್ಥ ನಾರಾಯಣ, ಶಾಸಕ ಪಿ.ರಾಜೀವ್ ವಾಗ್ದಾಳಿ ನಡೆಸಿದ್ದಾರೆ. ಇದು ಕಾಂಗ್ರೆಸ್ ನ ಶೋಕ ಯಾತ್ರೆಯಾಗಲಿದೆ ಎಂದು ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕಾಂಗ್ರೆಸ್ ನವರು ಪ್ರಜಾಧ್ವನಿಗೆ ಯಾವತ್ತೂ ಮಹತ್ವ ಕೊಟ್ಟವರೇ ಅಲ್ಲ, ಈಗ ಪ್ರಜಾಧ್ವನಿ ಹೆಸರಲ್ಲಿ ಬಸ್ ಯಾತ್ರೆ ಮಾಡುವ ಮೂಲಕ ನಾಟಕವಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಮಾನ್ಯತೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಧ್ವನಿ ಬಸ್ ಯಾತ್ರೆ ಜನರ ದ್ವನಿಯಲ್ಲ, ಇದು ಕಾಂಗ್ರೆಸ್ ಶೋಕ ಯಾತ್ರೆಯಾಗಲಿದೆ. ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದಾಗ ಜನರಿಗಾಗಿ ಏನೂ ಮಾಡಿಲ್ಲ. ಈಗ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.

ಉಚಿತ ವಿದ್ಯುತ್ ಎಂದು ಸಿದ್ದರಾಮಯ್ಯ ಕರೆಂಟ್ ಇಲ್ಲದೇ ಬಜೆಟ್ ಮಂಡಿಸಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಈ ಹಿಂದೆಯೇ ಇದು ತನ್ನ ಕೊನೇ ಚುನಾವಣೆ ಎಂದು ಹೇಳಿದ್ದರು. ಈಗ ವಯಸ್ಸಾಗಿದೆ ಸೆಲ್ಫ್ ರಿಟೈರ್ ಮೆಂಟ್ ತೆಗೆದುಕೊಳ್ಳದೇ ಮತ್ತೆ ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ. ಯುವಕರಿಗೆ ತೊಗಳ್ರಪ್ಪ ಎಂದು ಅಧಿಕಾರ ಬಿಟ್ಟುಕೊಡದೇ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಮತ್ತೆ ಕನಸು ಕಾಣ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಅಧಿಕಾರದ ದಾಹ. ಸ್ಟೇ ಸಿದ್ದರಾಮಯ್ಯ ಎನ್ನಬೇಕು ಎಂದು ಲೇವಡಿ ಮಾಡಿದರು.

ಇದೇ ವೇಳೆ ಮಾತನಾಡಿದ ಶಾಸಕ ಪಿ.ರಾಜೀವ್, ಕಾಂಗ್ರೆಸ್ ಓಡುವ ಬಸ್ ಅಲ್ಲ, ದೂಡುವ ಬಸ್. ಸಿದ್ದರಾಮಯ್ಯ ಕೈಯಲ್ಲಿ ಸ್ಟೇರಿಂಗ್ ಇದ್ರೆ, ಡಿ.ಕೆ.ಶಿವಕುಮಾರ್ ಕೈಲಿ ಬ್ರೇಕ್ ಇದೆ. ಅವರದ್ದು ಪ್ರಜಾಧ್ವನಿ ಯಾತ್ರೆಯಲ್ಲ, ಜನರ ಶೋಕ ಯಾತ್ರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಪ್ರಜೆಗಳ ಧ್ವನಿ ಆಲಿಸಿದ್ದರೆ ಭಗತ್ ಸಿಂಗ್ ನೇಣಿಗೆ ಏರುವುದನ್ನು ತಪ್ಪುಸಬಹುದಿತ್ತು. ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಿರಲಿಲ್ಲ, ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದರು.

*BREAKING: ಮನೆಯೊಂದರಲ್ಲಿ ಬಾಂಬ್ ಸ್ಫೋಟ: ಇಬ್ಬರಿಗೆ ಗಂಭಿರ ಗಾಯ*

https://pragati.taskdun.com/keralatalasyeribomb-blasttwo-injuerd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button