Latest

*ಬೆಳಗಾವಿ: ಪ್ರಜಾಧ್ವನಿ ಯಾತ್ರೆ ಏಕಾಏಕಿ ರದ್ದುಗೊಳಿಸಿದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ದಿಢೀರ್ ಆಗಿ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಿಂದ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಸಿದ್ದರಾಮಯ್ಯ, ಎರಡು ದಿನಗಳಿಂದ ಪ್ರಜಾಧ್ವನಿ ಸಮಾವೇಶ, ಯಾತ್ರೆ ಕೈಗೊಂಡಿದ್ದಾರೆ. ಆದರೆ ಇಂದು ನಡೆಯಬೇಕಿದ್ದ ಎರಡು ಕ್ಷೇತ್ರಗಳ ಪ್ರಜಾಧ್ವನಿ ಸಮಾವೇಶವನ್ನು ರದ್ದುಗೊಳಿಸಿದ್ದಾರೆ.

ಗೋಕಾಕ ಮತ್ತು ಕಲ್ಲೋಳಿಗಳಲ್ಲಿ ಇಂದು ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ದಿಢೀರ್ ಆಗಿ ಎರಡೂ ಕ್ಷೇತ್ರಗಳ ಪ್ರಜಾಧ್ವನಿ ಸಮವೇಶವನ್ನು ಸಿದ್ದರಾಮಯ್ಯ ರದ್ದುಗೊಳಿಸಿದ್ದಾರೆ. ಸಂಜೆ 6ಗಂಟೆಗೆ ಹುಕ್ಕೇರಿಯಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಬೆಳಗಾವಿಯ ಹೋಟೇಲ್ ನಲ್ಲಿಯೇ ಇರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಜಿಲ್ಲಾ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಉದ್ದೇಶಪೂರ್ವಕವಾಗಿ ಕೆಲವರು ದಾರಿ ತಪ್ಪಿಸಿ ಈ ಎರಡೂ ಸಮಾವೇಶ ರದ್ದಾಗುವಂತೆ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

*ಏನ್ ಮಂತ್ರಿಗಳೇ ನಿಂತ್ಕೊಳ್ರೀ… ನಾನು ಕ್ಷೇತ್ರದ ಸಂಸದ ನಮಗೆ ಪ್ರೋಟೋಕಾಲ್ ಇಲ್ವಾ; ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ*

https://pragati.taskdun.com/d-k-sureshashwaththanarayanaramanagara-hospital/

Related Articles

Back to top button