Kannada NewsKarnataka NewsNationalPolitics

*ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು..?* 

ಪ್ರಗತಿವಾಹಿನಿ ಸುದ್ದಿ: ಹೆಚ್ ಡಿ ದೇವೇಗೌಡರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸು ಅಂತ ಎಚ್ಚರಿಕೆ ನೀಡಿದ್ದರೆ ನಾನು ಮನವಿ ಮಾಡಿದ್ದೆ, ಅದಕ್ಕೆ ಓಗೊಟ್ಟು ಅವನು ವಾಪಸ್ಸು ಬರುತ್ತಿರುವುದು ಸಮಾಧಾನ ತಂದಿದೆ ಎಂದು ಪ್ರಜ್ಚಲ್ ರೇವಣ್ಣ ದೇಶಕ್ಕೆ ವಾಪಸ್ ಆಗುತ್ತಿರುವ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.‌

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವನು ವಾಪಸ್ಸು ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾದ ಬಳಿಕ ಕಾನೂನು ಪ್ರಕ್ರಿಯೆ ಶುರುವಾಗುತ್ತದೆ, ಅದು ಎಲ್ಲಿಗೆ ತಲುಪುತ್ತದೆಯೋ ನೋಡೋಣ ಎಂದು ಹೇಳಿದರು. 

ವಿಡಿಯೋನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅದೆಲ್ಲ ತನಿಖೆಯಲ್ಲಿ ಗೊತ್ತಾಗಲಿದೆ ಎಂದರು. ಪ್ರಜ್ವಲ್ ಕ್ಷಮೆ ಕೇಳಿರುವ ಬಗ್ಗೆಯೂ ಮಾತಾಡಿದ ಕುಮಾರಸ್ವಾಮಿ, ಅವನು ಕಾರ್ಯಕರ್ತರ ಕ್ಷಮೆ ಕೇಳಿರುವುದು ಅವರ ಬಗ್ಗೆ ಗೌರವಾದರ ಮತ್ತು ಮಮತೆ ಹೊಂದಿರುವುದನ್ನು ತೋರಿಸುತ್ತದೆ, ಈ ವಿಷಯ ತನಗೆ ಬಹಳ ಸಮಾಧಾನ ನೀಡಿದೆ ಎಂದರು.

Home add -Advt

Related Articles

Back to top button