Karnataka NewsLatestPolitics

*ಪ್ರಜ್ವಲ್ ರೇವಣ್ಣ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ: 8 ಆರೋಪಿಗಳಿಗೆ ಎದುರಾಯ್ತು ಸಂಕಷ್ಟ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ ಪ್ರಕರಣದಲ್ಲಿ 8 ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.

ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಪೆನ್​​​ಡ್ರೈವ್​​ ಮೂಲಕ ಹಂಚಿದ ಆರೋಪದಲ್ಲಿ 8 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ.

Home add -Advt

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ, ಐಪಿಸಿ ಸೆ.509ರಡಿ ಪ್ರಕರಣರದ ಎ2 ನವೀನ್ ಗೌಡ, ಎ3 ಹೆಚ್.ಪಿ.ಲಿಖಿತ್, ಎ4 ಎಂ.ಜೆ.ನಿಶಾಂತ್, ಎ5 ಎಸ್.ಕೆ.ಕಿರಣ್, ಎ6 ಎಂ.ಜಿ.ಶರತ್, ಎ7 ಡಿ.ಎನ್.ತೇಜಸ್, ಎ8 ಸಿ.ಗಗನ್ ಕುಮಾರ್, ಎ9 ಹೆಚ್​.ರೇವಂತ್​ಗೆ ಸಮನ್ಸ್ ಜಾರಿ ಮಾಡುವಂತೆ ನ್ಯಾಯಾಧೀಶ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

Related Articles

Back to top button