ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಇತ್ತ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದರೆ ಅತ್ತ ಗೌಡರ ಕುಟುಂಬದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ.
ತುಮಕೂರಿನಲ್ಲಿ ಸ್ಪರ್ಧಿಸಿ ಸೋತು ಸುಣ್ಣವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಲೋಕಸಭೆಯ ಕನಸು ಮತ್ತೆ ಚುಗುರೊಡೆದಿದೆ.
ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ…
ಜೆಡಿಎಸ್ ಮಾಜಿ ರಾಜ್ಯಧ್ಯಕ್ಷ, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ವಿಶ್ವನಾಥ ಈಗ ರಾಜಿನಾಮೆ ನೀಡಿದ್ದಾರೆ. ಹಾಗಾಗಿ ಹುಣಸೂರಿನಲ್ಲಿ ಉಪಚುನಾವಣೆ ಗ್ಯಾರಂಟಿ. ಹಾಗಾಗಿ ಅಲ್ಲಿಂದ ಸ್ಪರ್ಧಿಸಲು ಗೌಡರ ಮೊಮ್ಮಗ, ಹಾಲಿ ಹಾಸನ ಸಂಸದ ಪ್ರಜ್ವಲ ರೇವಣ್ಣ ಚಿಂತನೆ ನಡೆಸಿದ್ದಾರೆ. ಆಗ ಪ್ರಜ್ವಲ್ ಪ್ರತಿನಿಧಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರ ಖಾಲಿಯಾಗುತ್ತದೆ. ಅಲ್ಲಿಂದ ಅಜ್ಜ ದೇವೇಗೌಡ ಸ್ಪರ್ಧಿಸ್ತಾರಂತೆ.
ಇದರಿಂದಾಗಿ, ವಿಧಾನಸಭೆ ಪ್ರವೇಶಿಸಬೇಕೆನ್ನುವ ಪ್ರಜ್ವಲ್ ಕನಸೂ ನನಸಾಗುತ್ತದೆ, ಲೋಕಸಭೆಗೆ ಹೋಗುವ ದೇವೇಗೌಡರ ಕನಸೂ ನನಸಾಗುತ್ತದೆ ಎನ್ನುವುದು ಗೌಡರ ಕುಟುಂಬದ ಲೆಕ್ಕಾಚಾರ. ಹಾಗಾಗಿ ಈಗಿನ ರಾಜಕೀಯ ಬೆಳವಣಿಗೆ ಒಂದು ಕಡೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದರೂ ಅದನ್ನು ಹೇಗೆ ಲಾಭ ಮಾಡಿಕೊಳಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಗೌಡರ ಕುಟುಂಬವಿದೆ.
ಹೇಗಿದೆ ಲೆಕ್ಕಾಚಾರ?
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ. ಹೆಚ್ಚಿನ ಸುದ್ದಿಗಳಿಗೆ pragativahini.com ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ