Kannada NewsKarnataka NewsLatest

ಸುರೇಶ ಇಟ್ನಾಳ್, ಶಶಿಧರ ಕುರೇರ್ ಗೆ ಹೊಸ ಜವಾಬ್ದಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಶಿಧರ ಕುರೇರ ಬೆಳಗಾವಿಯಲ್ಲೇ ಉಳಿದುಕೊಳ್ಳಲು ಯಶಸ್ವಿಯಾಗಿದ್ದರೆ, ಕಾರವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಬೆಳಗಾವಿಗ ಸ್ವಲ್ಪ ಹತ್ತಿರ ಬರುವಲ್ಲಿ ಯಶ ಸಾಧಿಸಿದ್ದಾರೆ.

Home add -Advt

ಶಶಿಧರ ಕುರೇರ್ ಗೆ ಅನಿರೀಕ್ಷಿತ ವರ್ಗಾವಣೆಯಾಗಿದೆ. 2 ಬಾರಿ ಚುನಾವಣೆ ವೇಳೆ ಬೆಳಗಾವಿಯಿಂದ ಬಾಗಲಕೋಟೆಗೆ ವರ್ಗಾವಣೆಗೊಂಡಿದ್ದರೂ ಪುನಃ ಬೆಳಗಾವಿ ಮಹಾನಗರ ಪಾಲಿಕೆಗೇ ಬಂದಿದ್ದರು. ಆದರೆ ಕಳೆದ ವಾರ ಅವರನ್ನು ಪಾಲಿಕೆಯಿಂದ ಬಿಡುಗಡೆ ಮಾಡಿದ್ದರೂ ಹೊಸ ಹುದ್ದೆ ತೋರಿಸಿರಲಿಲ್ಲ. ಇದೀಗ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಸುರೇಶ ಇಟ್ನಾಳ ಅವನರನ್ನು ವಿಧಾನಸಭೆ ಚುನಾವಣೆ ವೇಳೆ ಕಾರವಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ ನಂತರ ಅವರನ್ನು ವಾಪಸ್ ಬೆಳಗಾವಿಗೆ ವರ್ಗಮಾಡಿರಲೇ ಇಲ್ಲ. ಕಾರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಬಿಡುಗಡೆ ಮಾಡಲು ಸಿದ್ದರಿರಲಿಲ್ಲ.

ಇದೀಗ ಇಟ್ನಾಳ್ ಅವರನ್ನು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

Related Articles

Back to top button