ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಚೆಕ್‌ಮೇಟ್ ಸ್ಕೂಲ್ ಆಫ್ ಚೆಸ್ ವತಿಯಿಂದ ಭಾನುವಾರ ನಗರದ ಸಂತ ಜರ್ಮನ್ಸ್ ಪ್ರೌಢಶಾಲೆಯಲ್ಲಿ ರ‍್ಯಾಪಿಡ್ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ವಯೋಮಿತಿ 15, 13, 11 ಮತ್ತು 9ರೊಳಗಿನ ವಿಭಾಗಗಳಲ್ಲಿ ಪ್ರತ್ಯೇಕ ನಡೆದ ಪಂದ್ಯಾವಳಿಯಲ್ಲಿ ಕ್ರಮವಾಗಿ ಪ್ರಜ್ವಲ್ ಮಂಜುನಾಥ ಜೋಶಿ, ಶ್ರೀಕರ ದರ್ಭಾ, ಸಾಯಿ ಪರಶುರಾಮ ಮಂಗನಾಯ್ಕ ಮತ್ತು ಅನಿರುದ್ಧ ದತ್ತಾತ್ರೇಯ ರಾವ್ ದಾಸರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಂತ ಜರ್ಮನ್ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಉದಯಕುಮಾರ್ ಇಡಗಲ್ ಮತ್ತು ಕಾರ್ಯದರ್ಶಿ ಆನಂದ ಕಳಸದ ವಿಜೇತರಿಗೆ ಬಹುಮಾನ ವಿತರಿಸಿದರು. ಅತಿಥಿಗಳಾಗಿ ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿಯ ಸಹಾಯಕ ಪ್ರಾಧ್ಯಾಪಕ ಡಿ.ನಿತ್ಯಾನಂದ ಶಾಸ್ತಿ ಮತ್ತು ಉದ್ಯಮಿ ಮನ್ಸೂರ್ ಖಾನ್ ಉಪಸ್ಥಿತರಿದ್ದರು. ಚೆಕ್‌ಮೇಟ್ ಸ್ಕೂಲ್ ಆಫ್ ಚೆಸ್ ಸಂಸ್ಥಾಪಕ ವಿವೇಕ ಮಹಾಲೆ ಸ್ವಾಗತಿಸಿದರೆ, ಸಂತ ಮೀರಾ ಪ್ರೌಢಶಾಲೆ ಶಿಕ್ಷಕಿ ಸವಿತಾ ಜೋಶಿ ನಿರೂಪಿಸಿ, ವಂದಿಸಿದರು.
ಬೆಳಗಾವಿ, ಗೋಕಾಕ, ಸಂಕೇಶ್ವರ, ಧಾರವಾಡ, ಹುಬ್ಬಳ್ಳಿ ಮತ್ತಿತರ ಕಡೆಗಳಿಂದ ಆಗಮಿಸಿದ್ದ 78 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ನಿರ್ಣಾಯಕರಾಗಿ ಗಿರೀಶ್ ಬಾಚಿಕರ್ ಕಾರ್ಯನಿರ್ವಹಿಸಿದ್ದರು. ಸ್ವಪ್ನಾ ದಾಸರಿ, ಶಗುಫ್ತಾ ಖಾನ್ ಸಹಾಯಕರಾಗಿದ್ದರು.
ಬೆಳಗಾವಿ ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ದತ್ತಾತ್ರೇಯರಾವ್ ದಾಸರಿ ಪಂದ್ಯಾವಳಿ ಉದ್ಘಾಟಿಸಿದರು. ಅಸೋಸಿಯೇಶನ್ ಸಂಸ್ಥಾಪಕ ಸದಸ್ಯ ಪ್ರಕಾಶ್ ಕುಲಕರ್ಣಿ ಉಪಸ್ಥಿತರಿದ್ದರು.
ಫಲಿತಾಂಶ :
15ರ ವಯೋಮಿತಿ :
1.ಪ್ರಜ್ವಲ್ ಜೋಶಿ, 2.ರಯೀಸ್ ಅಹ್ಮದ್ ಖಾನ್, 3. ಶೆಫಾಲಿ ತೀರ್ಥಹಳ್ಳಿ, 4.ಓಂಕಾರ್ ನಂದವಾಡೇಕರ್, 5.ಸಮ್ರುದ್ಧ ಹುಂಬರವಾಡಿ.
13ರ ವಯೋಮಿತಿ: 1.ಶ್ರೀಕರ ದರ್ಭಾ, 2. ವೈಭವ್ ಕುಲಕರ್ಣಿ, 3.ಯೋಗರಾಜ ವಿವೇಕ ಮಹಾಲೆ, 4. ತನಿಷ್ಕಾ ಬೆಹೆರೆ, 5.ಸಾಹಿಲ್ ಪ್ರವೀಣ ಭಟ್
11ರ ವಯೋಮಿತಿ: 1.ಸಾಯಿ ಪರಶುರಾಮ್ ಮಂಗನಾಯ್ಕ್, 2.ಮಾಧವ ದತ್ತಾತ್ರೇಯ ರಾವ್ ದಾಸರಿ, 3.ಅಂಕಿತ ಕುಮಾರ್ ಝಾ, 4.ಸುನೀಲ್ ರಾಜು ಹಟ್ಟಿಹೋಳಿ, 5.ಆದಿತ್ಯ ಶಾನಭಾಗ.
9ರ ವಯೋಮಿತಿ: 1.ಅನಿರುದ್ಧ ದತ್ತಾತ್ರೇಯ ರಾವ್ ದಾಸರಿ, 2.ವಿಷ್ರುತ್ ದೇಶಪಾಂಡೆ, 3.ಅದ್ವಯ್ ಮನ್ನೋಳ್ಕರ್, 4.ಗಿತೇಶ್ ಸಾಗೇಕರ್, 5.ಅಶುತೋಷ್ ಎಸ್.ಉಮತ್ತುರ್.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ