Kannada NewsKarnataka NewsLatest

ಅಂಗಡಿ ಕುಟುಂಬಕ್ಕೆ ನನ್ನ ಬೆಂಬಲ ಎಂದಿದ್ದ ಪ್ರಕಾಶ ಹುಕ್ಕೇರಿ ಮೊದಲ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – “ಬಿಜೆಪಿಯಿಂದ ಸುರೇಶ ಅಂಗಡಿ ಕುಟುಂಬದ ಯಾರಿಗೇ ಟಿಕೆಟ್ ನೀಡಲಿ, ನಾನು ಅವರ ಪರವಾಗಿ ಕ್ಷೇತ್ರದಲ್ಲೆಲ್ಲ ಸುತ್ತಾಡಿ ಪ್ರಚಾರ ಮಾಡುತ್ತೇನೆ. ನನ್ನ ಮಗನ ಚುನಾವಣೆಗೆ ಕೆಲಸ ಮಾಡಿದ ರೀತಿಯಲ್ಲೇ ಮಾಡುತ್ತೇನೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಏನ್ ಮಾಡುತ್ತೋ ಮಾಡ್ಕೊಳ್ಳಿ ನೋಡೋಣ” ಎಂದು ಸವಾಲೆಸೆದಿದ್ದ ಮಾಜಿ ಸಂಸದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಇದೀಗ ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ನಂತರ   ಪ್ರಗತಿವಾಹಿನಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಈಗ ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ನಾಮಪತ್ರ ಸಲ್ಲಿಕೆ ಮುಗಿಯಲಿ. ನಂತರ ಹೇಳುತ್ತೇನೆ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಆಗ ನಾನು ಹೇಳಿದ್ದು ನಿಜ. ಈಗಷ್ಟೆ ಟಿಕೆಟ್ ಘೋಷಣೆಯಾಗಿದೆ. ನನ್ನ ನಿರ್ಧಾರವನ್ನು ತರಾತುರಿಯಲ್ಲಿ ಪ್ರಕಟಿಸುವ ಅಗತ್ಯವಿಲ್ಲ. ಇನ್ನೂ ಸಮಯವಿದೆ. ಮುಂದೆ ಹೇಳುತ್ತೇನೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಸಲು ನನ್ನ ಹೆಸರನ್ನೇ ಹೈಕಮಾಂಡ್ ಗೆ ಕಳಿಸಲಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

Home add -Advt

ಪ್ರಕಾಶ ಹುಕ್ಕೇರಿ ಅಂದು ಹೇಳಿದ್ದೇನು? – ಇಲ್ಲಿ ಕ್ಲಿಕ್ ಮಾಡಿ.

ಪ್ರಕಾಶ ಹುಕ್ಕೇರಿ ಡಬಲ್ ಬಾಂಬ್: ಬಿಜೆಪಿ ಸೇರಿದಂತೆ ಟಿಕೆಟ್ ಕೊಡುವ ಪಕ್ಷಕ್ಕೆ ಹೋಗಲು ರೆಡಿ – ಪ್ರಗತಿವಾಹಿನಿ ವಿಶೇಷ ಸಂದರ್ಶನ

 ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್

ಸತೀಶ್ ಜಾರಕಿಹೊಳಿಯೇ ಅಭ್ಯರ್ಥಿ: ಈಗ ಅಧಿಕೃತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button