ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿಯ ಅರುಣ ಶಹಾಪುರ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದ ಪ್ರಕಾಶ ಹುಕ್ಕೇರಿ, ವಿಧಾನಪರಿಷತ್ ಪ್ರವೇಶಿಸಿದ್ದಾರೆ. ಶಾಸಕರಾಗಿ, ಸಂಸದರಾಗಿ, ರಾಜ್ಯದ ಸಚಿವರಾಗಿ ಕೆಲಸ ನಿರ್ವಹಿಸಿರುವ ಪ್ರಕಾಶ ಹುಕ್ಕೇರಿ, ಕೆಲಸಗಾರ ಎನ್ನುವ ಹೆಸರು ಮಾಡಿದವರು.
ಚುನಾವಣೆ ವೇಳೆ ಬಂದ ಹಲವಾರು ಆರೋಪಗಳ ಮಧ್ಯೆಯೂ ಪ್ರಕಾಶ ಹುಕ್ಕೇರಿ ಗೆದ್ದು ಬೀಗಿದ್ದಾರೆ. ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ವಿಧಾನಸಭಾ ಸದಸ್ಯರಾಗಿದ್ದಾರೆ.
ಪಕ್ಷದ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದರೂ ಸೋಲಾಗಿದೆ. ಸೋಲನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುತ್ತೇನೆ. ಸೋಲಿಗೆ ಕಾರಣ ಹುಡುಕುತ್ತೇನೆ ಎಂದು ಅರುಣ ಶಹಾಪುರ ಪ್ರತಿಕ್ರಿಯಿಸಿದರು.
2ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಪ್ರಕಾಶ ಹುಕ್ಕೇರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ