ಮೋದಿ ಹೆಸರೇಳಿದ್ರೆ ಬಾಯಲ್ಲಿ ಬೂಟು ಹಾಕ್ತಾರಂತೆ!

ಪ್ರಗತಿವಾಹಿನಿ ಸುದ್ದಿ, ಕಲಬುರಗಿ:

ಮುಂದಿನಬಾರಿ ಸ್ಪರ್ಧಿಸಿದಾಗ ಮತ್ತೆ ಮೋದಿ ಹೆಸರಲ್ಲಿ ಮತ ಕೇಳಿದರೆ ಬಾಯಲ್ಲಿ ಬೂಟು ಹಾಕ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

Home add -Advt

ಅಫಜಲ್ ಪುರದಲ್ಲಿ ಮೊನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರತಿ ಬಾರಿ ಮೋದಿ ಹೆಸರು ಹೇಳಿ ಗೆಲ್ಲುವ ಮೂಲಕ ಮತದಾರರಿಗೆ ಮೋಸ ಮಾಡುತ್ತಿದ್ದಾರೆ. ಏನೂ ಕೆಲಸ ಮಾಡುವುದಿಲ್ಲ. ಮುಂದಿನ ಬಾರಿಯೂ ಇದೇ ರೀತಿ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದರು.
ಐದಾರು ಬಾರಿ ಗೆಲ್ಲುತ್ತೀರಿ, ಇಪ್ಪತ್ತೈದು ವರ್ಷ ಒಂದು ಜಿಲ್ಲೆಯನ್ನಾಳುತ್ತೀರಿ. ನಾಚಿಕೆ ಬರುವುದಿಲ್ಲ ನಿಮಗೆ? ನಿರ್ಲಜ್ಜರು ನೀವು. ಮೋದಿ ಅವರ ಮುಖ ನೋಡಿ, ಮೋದಿ ಅವರ ಗಂಡಸ್ತನ ನೋಡಿ, ಮೋದಿ ಅವರ ಹಿಂದುತ್ವದ ವಿಚಾರ ನೋಡಿ ನಾವು ಅವರಿಗೆ ವೋಟ್ ಹಾಕಿದ್ದೇವೆ. ಈ ಐದು ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೇವೆ ಎಂಬ ಎಚ್ಚರಿಕೆಯನ್ನು ಅವರಿಗೆ ಕೊಡಬೇಕಿದೆ’ ಎಂದು ಹೇಳಿದ್ದಾರೆ.

Related Articles

Back to top button