ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀಪಾವಳಿ ವೇಳೆ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪಟಾಕಿ ನಿಷೇಧದಿಂದ ಪರಿಸರ ನಾಶ ತಡೆಯಲಾಗಲ್ಲ ಎಂದಿದ್ದಾರೆ.
ಹುಕ್ಕೇರಿಯಲ್ಲಿ ಮಾತನಾಡಿದ ಮುತಾಲಿಕ್, ಪಟಾಕಿಯಿಂದ ಮಾತ್ರ ಪರಿಸರ ಮಾಲಿನ್ಯವಾಗುತ್ತದೆ ಎಂಬುದು ತಪ್ಪು. ವಾಹನಗಳಿಂದ, ಅಭಿವೃದ್ಧಿ ಹೆಸರಲ್ಲಿ ಅರಣ್ಯ ಸಂಪತ್ತು ನಾಶ ಮಾಡುವುದರಿಂದ ಪರಿಸರ ನಾಶವಾಗುತ್ತಿದೆ. ಪರಿಸರ ಮಾಲಿನ್ಯಕ್ಕೆ ಹಲವು ಕಾರಣವಿರುವಾಗ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಯಲಾಗಲ್ಲ ಎಂದರು.
ಆರೋಗ್ಯದ ಕಾರಣಕ್ಕೆ ಪಟಾಕಿ ನಿಷೇಧ ಎನ್ನುವುದಾದರೆ ರಾಜ್ಯ ಸರ್ಕಾರ ಪಬ್, ಬಾರ್ ಗಳ ಬಗ್ಗೆಯೂ ಯೋಚಿಸಬೇಕು. ಅವುಗಳಿಗೆ ಯಾಕೆ ಅವಕಾಶ ನೀಡಿದ್ದೀರಿ? ಇಂದಿನ ಯುವಜನತೆ ಮಧ್ಯಪಾನದ ದಾಸರಾಗಿ ಬೀದಿಗೆ ಬೀಳುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಬೀದಿಗೆ ತರುತ್ತಿದ್ದಾರೆ. ಮಧ್ಯಪಾನದಂತಹ ನಶೆಯಿಂದ ಆರೋಗ್ಯ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಪಟಾಕಿ ನಿಷೇಧ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ