Belagavi NewsBelgaum NewsKannada NewsKarnataka NewsNationalPolitics

*ದೇವಸ್ಥಾನದ ಜಾಗೆ ವಶಪಡಿಸಿಕೊಳ್ಳುವಂತೆ ಡಿಸಿಗೆ ಮನವಿ ಮಾಡಿದ ಪ್ರಮೋದ ಮುತಾಲಿಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೊದಗಾ ಗ್ರಾಮದಲ್ಲಿ ದೇವಸ್ಥಾನದ ಟ್ರಸ್ಟ್ ಗೆ ಸೇರಿದ ಜಮೀನನ್ನು ನಾಜೀರ್ ಬಗವಾನ ಎಂಬ ವ್ಯಕ್ತಿ ತನ್ನ ಹೆಸರಿಗೆ ಮಾಡಿಕೊಂಡಿದ್ದು, ಆ ಜಮೀನು ದೇವಸ್ಥಾನಕ್ಕೆ ಸೇರಿದೆ. ಹಾಗಾಗಿ ಕೂಡಲೆ ದೇವಸ್ಥಾನದ ಹೆಸರಿಗೆ ದಾಖಲೆ ಆಗಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಅವರು ಆಗ್ರಹಿಸಿದರು. 

ಬುಧವಾರ ಬೆಳಗಾವಿ ಡಿಸಿ ಮೊಹಮ್ಮದ ರೋಷನ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಬೆಳಗಾವಿ ತಾಲೂಕಿನ ಮೊದಗಾ ಗ್ರಾಮದ ದೇವಸ್ಥಾನಕ್ಕೆ ಸೇರಿದ ಜಮೀನನ್ನು ನಾಜೀರ್ ಬಗವಾನ ಎಂಬ ವ್ಯಕ್ತಿ ತನ್ನ ಹೇಸರಿಗೆ ಮಾಡಿಕೊಂಡಿದ್ದಾನೆ. ಕಳೆದ 50 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹೋರಾಟ ಕೊಣೆಗಾಣಿಸಬೇಕು ಎಂಬ ಹಿನ್ನೆಲೆಯಲ್ಲಿ ಡಿಸಿಗಳಿಗೆ ಮನವಿ ಸಲ್ಲಿಸಿದ್ದೇವೆ.  ಕೂಡಲೆ ದೇವಸ್ಥಾನದ ಟ್ರಸ್ಟ್‌ಗೆ ಆ ಜಮೀನು ಟ್ರಾನ್ಸಫರ್ ಆಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

Related Articles

Back to top button