Latest

ಪತ್ರಿಕಾಗೋಷ್ಠಿಯಲ್ಲಿ ಕೆಂಡಾಮಂಡಲರಾದ ಬಿಹಾರ ಸಿಎಂ ನಿತೀಶ್ ಕುಮಾರ್; ವೈರಲ್ ಆದ ವಿಡಿಯೊ ಕ್ಲಿಪ್

ಪ್ರಗತಿವಾಹಿನಿ ಸುದ್ದಿ, ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ  ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪತ್ರಿಕಾಗೋಷ್ಠಿಯ ವಿಡಿಯೊ ಕ್ಲಿಪ್ ಒಂದು ವೈರಲ್ ಆಗಿದೆ.

ರಾವ್ ಅವರು ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲು ಪಾಟ್ನಾಕ್ಕೆ ತೆರಳಿದ್ ವೇಳೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

“ನೀವು ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತೀರಾ? “ರಾಹುಲ್ ಗಾಂಧಿಯವರು ಪ್ರಧಾನಿ ಅಭ್ಯರ್ಥಿಯಾಗುವ ಬಗ್ಗೆ  ನಿಮ್ಮ ಅಭಿಪ್ರಾಯಗಳೇನು?” ಎಂದು ರಾವ್ ಅವರನ್ನು ಮಾಧ್ಯಮದವರು ಕೇಳಿದಾಗ  ನಿತೀಶ್ ಕುಮಾರ್ ಕೆಂಡಾಮಂಡಲವಾಗಿದ್ದಾರೆ.

ಎದ್ದುನಿಂತು ಇದನ್ನು ಪ್ರತಿಭಟಿಸಿದ ನಿತೀಶ್ ಕುಮಾರ್ ಅವರನ್ನು ರಾವ್ ಕೈ ಹಿಡಿದು ಕುಳಿತುಕೊಳ್ಳುವಂತೆ ವಿನಂತಿಸಿದ್ದಾರೆ.

Home add -Advt

“2024 ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಯಲ್ಲಿ ಕಾಂಗ್ರೆಸ್ ಪಾತ್ರವಿದೆಯೇ” ಎಂದು ಕೆಸಿಆರ್ ಅವರನ್ನು ಕೇಳಿದಾಗ  ರಾವ್ಅ ವರು ಪ್ರಶ್ನೆಗೆ ಉತ್ತರಿಸಲು  ಮುಂದಾದರು. ಈ ವೇಳೆ ನಿತೀಶ್ ಕುಮಾರ್ ಅಂತಹ ಪ್ರಶ್ನೆಗಳನ್ನು ತಳ್ಳಿಹಾಕುವಂತೆ ಒತ್ತಾಯಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೇದಿಕೆಯಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಉಪಸ್ಥಿತರಿದ್ದರು.

ಜೆಎಸ್‌ಎಸ್ ಸಂಸ್ಥೆಗಳ ಉಪಾಧ್ಯಕ್ಷ ಡಾ. ಎನ್. ವಜ್ರಕುಮಾರ ದೇಹಾಂತ್ಯ

 

Related Articles

Back to top button