Kannada NewsKarnataka NewsLatest

*ನಿಮ್ಮ ಮಗನನ್ನು ಎಂಪಿ ಮಾಡಲು ನನ್ನ ವಿರುದ್ಧ ಷಡ್ಯಂತ್ರ; ಸಿಎಂ ಸಿದ್ದರಾಮಯ್ಯ ಸರ್ ನೀವು ಬ್ರೀಲಿಯಂಟ್ ಫಾದರ್, ಬ್ರೀಲಿಯಂಟ್ ಪೊಲಿಟಿಷಿಯನ್; ಪ್ರತಾಪ್ ಸಿಂಹ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮರಗಳನ್ನು ಕಡಿದ ಪ್ರಕರಣದಲ್ಲಿ ಸಹೋದರ ವಿಕ್ರಂ ಸಿಂಹನನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಮಗನನ್ನು ಎಂಪಿ ಮಾಡುವ ಉದ್ದೇಶದಿಂದ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್ ಐ ಆರ್ ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಬಂಧಿಸಲಾಗಿದೆ. ನಿನ್ನೆಯೇ ಬಂಧಿಸಿದ್ದರೂ ಈವರೆಗೂ ಕೋರ್ಟ್ ಗೆ ಹಾಜರುಪಡಿಸಿಲ್ಲ. ಸಿಎಂ ಸಿದ್ದರಾಮಯ್ಯ ಸರ್ ನೀವು ತುಂಬಾ ಬ್ರೀಲಿಯಂಟ್ ಫಾದರ್, ಬ್ರೀಲಿಯಂಟ್ ಪೊಲಿಟಿಷಿಯನ್. ನಿಮ್ಮ ಬುದ್ಧಿವಂತಿಕೆಗೆ ಕೈಮುಗಿಯಲೇ ಬೇಕು. ಆದರೆ ಇದಾವುದಕ್ಕೂ ನಾನು ಬಗ್ಗಲ್ಲ ಎಂದು ಗುಡುಗಿದ್ದಾರೆ.

ನನ್ನ ತಮ್ಮ ಅಷ್ಟೇ ಅಲ್ಲ, ನನ್ನ ಮನೆಯಲ್ಲಿ ವಯಸ್ಸಾಗಿರುವ ನನ್ನ ತಾಯಿ, ತಂಗಿಯೂ ಇದ್ದಾರೆ. ಅವರನ್ನೂ ಅರೆಸ್ಟ್ ಮಾಡಿಬಿಡಿ. ನನ್ನ ತೇಜೋವಧೆ ಮಡಿದ್ರೀ. ಈಗ ನನ್ನ ಮುಗಿಸುವ ಯತ್ನ ನಡೆಸಿದ್ದೀರಿ ಎಂದು ಕಿಡಿಕಾರಿದ್ದಾರೆ.

ನನ್ನ ವಿರುದ್ಧ ಎರಡು ಕ್ರಿಮಿನಲ್ ಕೇಸ್ ದಾಖಲಿಸಿದ್ದೀರಿ. ಡಿಸಿಎಂ ಸೇರಿದಂತೆ ನಿಮ್ಮ ಸಚಿವ ಸಂಪುಟದ ಎಲ್ಲಾ ಸಚಿವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಸಂಸತ್ ಪಾಸ್ ವಿchaaರವಾಗಿ ನನ್ನ ಹೆಸರು ಇಟ್ಟುಕೊಂಡು ತನಿಖೆ ನಡೆಸಲು ಹೇಳುತ್ತಿದ್ದೀರಿ. ಇಲ್ಲಿ ನಿಮ್ಮ ಮಗ ನನ್ನ ವಿರುದ್ಧ ತನಿಖೆ ಆಗಬೇಕು ಅಂತಿದ್ದಾರೆ. ಹನುಮಜಯಂತಿ ದಿನ ನಾನು ಒಂದು ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಕಾಂಗ್ರೆಸ್ ಟ್ವಿಟರ್ ಪೇಜ್ ನಲ್ಲಿ ಪ್ರತಾಪ್ ಸಿಂಹ ತಮ್ಮ ಮರಗಳ್ಳತನ ಮಾಡಿದ್ದಾನೆ ಎಂದು ಪೋಸ್ಟ್ ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button