
ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕ್ಕೇರಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಹಿಜಾಬ್ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಹೆಸರನ್ನೇ ಬದಲಿಸಿಕೊಳ್ತಾರೆ. ಅದಕ್ಕಾಗಿ ಹಿಜಾಬ್ ಪರ ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಜಮೀರ್ ಆಹ್ವಾನ ನೀಡಿದ್ದಾರೆ. ಹೀಗಾಗಿ ಅಧಿಕಾರಕ್ಕಾಗಿ ಸಿದ್ದರಾಮಯ್ಯ ‘ಸಿದ್ದ ರಹೀಮಯ್ಯ’ ಎಂದು ಹೆಸರಿ ಬದಲಿಸಿಕೊಳ್ತಾರೆ. ಇದೇ ಕಾರಣಕ್ಕೆ ಹಿಜಾಬ್ ಪರ ನಿಂತಿದ್ದಾರೆ. ವೋಟಿಗಾಗಿ ಮುಸ್ಲೀಂ ಸಮುದಾಯ ಓಲೈಕೆಗೆ ಮುಂದಾಗಿದ್ದಾರೆ ಎಂದು ಗುಡುಗಿದರು.
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಜಾರಿಗೆ ತರುವುದು ಒಳ್ಳೆಯದು. ಸಮವಸ್ತ್ರ ಎಂಬುದು ಕೇವಲ ಬಣ್ಣದ ಉಡುಪಲ್ಲ, ಎಲ್ಲಾ ಮಕ್ಕಳು ಸಮಾನರು ಎಂಬ ಸಮಾನತೆಯನ್ನು ಸಾರುವ ವಸ್ತ್ರ. ಹೀಗಾಗಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
ಪ್ರವಾಸಿ ವಿಮಾನ ಪತನ; 7 ಜನರು ದುರ್ಮರಣ


