Latest

*ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಿದರೂ ಹುಲಿ ಕಾಣಿಸಿಲ್ಲ, ಹಿಡಿದು ಮಾರಿ ಮಿಡ್ತಾರೆ ಎಂಬ ಬಯಕ್ಕೆ ಯಾವ ಗುಹೆ ಸೇರಿಕೊಂಡಿದೆಯೋ ಅಯ್ಯೋ ಪಾಪ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿದ್ದವರು. ಘನತೆಯಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ಕುರಿ ಚರ್ಬಿ ತಿಂದು ತಿಂದು ಸಿದ್ದರಾಮಯ್ಯನವರಿಗೆ ಕೊಬ್ಬು ಜಾಸ್ತಿಯಾಗಿದೆ. ಪ್ರಧಾನಿ ಮೋದಿಯವರ ವಿರುದ್ಧ ಟೀಕಿಸುತ್ತಲೇ ಇತ್ತಾರೆ ಎಂದು ಕಿಡಿಕಾರಿದರು. ಹುಲಿ ಯೋಜನೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ಬೇಸಿಗೆ ಇರುವ ಕಾರಣಕ್ಕೆ ಸಫಾರಿ ವೇಳೆ ಹುಲಿ ಕಾಣಿಸಿಲ್ಲ. ಅದಕ್ಕೂ ಸಿದ್ದರಾಮಯ್ಯನವರು ಕೊಂಕು ಮಾತನಾಡುತ್ತಿರುವುದು ಯಾಕೆ? ಎಂದು ಕೇಳಿದ್ದಾರೆ.

https://pragati.taskdun.com/vidhanasabha-electionbjp-candidate-listcm-basavaraj-bommaireaction/

Home add -Advt

Related Articles

Back to top button