*ಎಲ್ಲರಿಗೂ ಒಳಿತಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಎಲ್ಲರಿಗೂ ಒಳಿತಿಗಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ, ಲೋಕಕಲ್ಯಾಣವಾಗಲಿ. ನಿಮಗೂ (ಮಾಧ್ಯಮ) ಒಳ್ಳೆಯದಾಗಲಿ ಎಂದು ಶ್ರೀನಿವಾಸನಲ್ಲಿ ಬೇಡಿಕೊಂಡಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ದೇವರಲ್ಲಿ ಏನು ಪ್ರಾರ್ಥನೆ ಮಾಡಿದ್ದೀರಿ ಎಂದು ಕೇಳಿದಾಗ, “ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಏನೇ ಕೇಳಿಕೊಂಡರು ಅದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ” ಎಂದು ಹೇಳಿದರು.
“ಶ್ರೀನಿವಾಸ, ಪದ್ಮಾವತಿ, ಲಕ್ಷ್ಮಿ ಪ್ರತಿಯೊಬ್ಬರ ಮನೆ ತುಂಬಲಿ ಎಂದು ಪ್ರಾರ್ಥಿಸುತ್ತೇನೆ. ಇಡೀ ಮಾಗಡಿ ಜನತೆಗೆ ನೆಮ್ಮದಿ, ಸುಖ, ಶಾಂತಿ ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಎಂದರು.
“ಸಹೋದ್ಯೋಗಿ ಬಾಲಕೃಷ್ಣ, ಅವರ ಧರ್ಮಪತ್ನಿ ಹಾಗೂ ಕುಟುಂಬ ವರ್ಗ ಕಲ್ಯಾಣೋತ್ಸವ ನೆರವೇರಿಸಿದ್ದಾರೆ. ಇವರ ಮೇಲೂ ದೇವರ ಕೃಪೆ ಸದಾ ಇರುತ್ತದೆ. ಇಲ್ಲಿ ಶ್ರೀನಿವಾಸನ ದರ್ಶನ ಮಾಡುವ ಭಾಗ್ಯ ನನಗೆ ಹಾಗೂ ನನ್ನ ಕುಟುಂಬಕ್ಕೆ ದೊರಕಿದೆ. ಎಲ್ಲರಿಗೂ ಒಳಿತಾಗಲಿ” ಎಂದು ಹೇಳಿದರು.



