Belagavi NewsBelgaum News

*ರಾಷ್ಟ್ರೀಯ ಮತದಾರರ ದಿನ-೨೦೨೪ರ ಪೂರ್ವಭಾವಿ ಸಭೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಯೊಬ್ಬ ನಾಗರಿಕನ ಮತದಾನದ ಮೌಲ್ಯ ಕುರಿತು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮತದಾರರ ನೊಂದಣಿಗೆ ಪ್ರೇರಪಿಸಲು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಸ್ಥೆಯ ಚುನಾವಣಾ ಸಾಕ್ಷರತಾ ಸಂಘಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚಿಸಿದರು.


ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ (ಜ.೧೮) ನಡೆದ ರಾಷ್ಟ್ರೀಯ ಮತದಾರರ ದಿನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವಿಶೇಷ ಅಭಿಯಾನದ ಮೂಲಕ ಬೆಳಗಾವಿ ಜಿಲ್ಲೆಯು ಅತೀ ಹೆಚ್ಚು ಯುವ ಮತದಾರರ ನೊಂದಣಿ ಮಾಡಿರುವ ಕುರಿತು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.


ಅದರ ಜೊತೆಗೆ ೪ ವಿಧಧ ಚುನಾವಣಾ ಸಾಕ್ಷರತಾ ಸಂಘಗಳು ೧.ಮತದಾರರ ಜಾಗೃತಿ ವೇದಿಕೆ ೨. ಚುನಾವಣಾ ಪಾಠಶಾಲಾ ೩. ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ೪. ಕಾರ್ಖಾನೆ ಮತ್ತು ಕಚೇರಿಗಳು ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಚುನಾವಣಾ ಸಾಕ್ಷರತಾ ಸಂಘಗಳ ಮೂಲಕ ಮತದಾನದ ಜಾಗೃತಿ ಕಾರ್ಯ ಹಮ್ಮಿಕೊಳ್ಳಲು ತಿಳಿಸಿದರು.


ಎಲ್ಲಿ ಚುನಾವಣಾ ಸಾಕ್ಷರತಾ ಸಂಘಗಳು ರಚನೆ ಆಗಿಲ್ಲವೋ ಅಂತಹ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಚುನಾವಣಾ ಸಾಕ್ಷರತಾ ಸಂಘಗಳು ರಚನೆ ಮಾಡಲು ಕ್ರಮವಹಿಸಲು ಸೂಚಿಸಿದರು. ರಾಷ್ಟ್ರೀಯ ಮತದಾರರ ದಿನ ಜನೆವರಿ ೨೫ ರಂದು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಸಂಬಂಧ ಜಿಲ್ಲೆಯ ಎಲ್ಲ ಪ್ರೌಡ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾದ ಪ್ರಬಂಧ ಬರಹ, ರಸಪ್ರಶ್ನೆ, ಭಿತ್ತಿ ಚಿತ್ರ ರಚನೆ ಇತರೆ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿಧ್ಯಾರ್ಥಿ/ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪೆನ್ ವಿತರಿಸುವುದು.
ಅದೇ ರೀತಿ ಮತಕ್ಷೇತ್ರವಾರು ಚುನಾವಣಾ ಸಾಕ್ಷರತಾ ಸಂಘಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ೧೦ ಜನರಿಗೆ ಪ್ರಮಾಣಪತ್ರ ವಿತರಣೆ, ಮತ್ತು ಚುನಾವಣಾ ಸಾಕ್ಷರತಾ ಸಂಘಗಳ ಮೂಲಕ ಪದವಿ ಕಾಲೇಜುಗಳಲ್ಲಿ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರ ಮುಖಾಂತರ ಮತದಾನದ ಕುರಿತು ಸಮುದಾಯದ ಜನರಲ್ಲ್ಲಿ ವ್ಯಾಪಕ ಪ್ರಚಾರ ಮಾಡಿಸಲು ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ ಕುಲಸಚಿವರಿಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಸೂಚಿಸಿದರು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ವಿಜಯಕುಮಾರ ಹೊನಕೇರಿ, ಆಯುಕ್ತರು ಮಹಾನಗರ ಪಾಲಿಕೆ ಅಶೋಕ ದುಡಗುಂಟಿ, ಸ್ವೀಪ್ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು, ಅಧೀನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು/ತಾಲೂಕು ಮಟ್ಟದ ಅಧಿಕಾರಿಗಳು, ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಕುಲಸಚಿವರು, ಪದವಿ ಕಾಲೇಜಿನ ಮತದಾರರ ಸಾಕ್ಷರತಾ ಸಂಘ(ಇಐಅs)ಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಇತರೆ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button