Kannada NewsLatestNationalPolitics

*ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ವಿವರಣೆ ಕೇಳಿದ ಕೇಂದ್ರ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಾಂಘನೆಯಾಗಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಗೃಹ ಇಲಾಖೆ ಸಿಎಂ ಮಮತಾಬ್ಯಾನರ್ಜಿ ಸರ್ಕಾರಕ್ಕೆ ವಿವರಣೆ ಕೇಳಿದೆ.

ಭಾನುವಾರ ಸಂಜೆ ೫ ಗಂಟೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೇಳಿದೆ. ಬ್ಲೂ ಬುಕ್ ಶಿಷ್ಟಾಚಾರ, ಸ್ಥಳ ಹಾಗೂ ಮಾರ್ಗ ವ್ಯವಸ್ಥೆಗಳ ನಿಯಮ ಉಲ್ಲಂಘನೆಯ ಕುರಿತು ಪ್ರತಿಕ್ರಿಯೆ ಕೊಡುವಂತೆ ತಿಳಿಸಿದೆ.

ಬ್ಲೂ ಬುಕ್ ಒಂದು ಗೌಪ್ಯ ದಾಅಖಲೆಯಾಗಿದ್ದು, ಇದರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂಟ್ರಿಗಳು ಹಾಗೂ ಅವರ ಕುಟುಂಬಗಳಿಗೆ ಭದ್ರತೆ ಮತ್ತು ಶಿಷ್ಟಾಚಾರದ ನಿಯಮಗಳನ್ನು ಪಟ್ಟು ಮಾಡಲಾಗಿರುತ್ತದೆ.

Home add -Advt

ಉತ್ತರ ಬಂಗಾಳದ ಬಾಗ್ದೋಗ್ರಾ ವಿಮಾನ ನಿಲ್ದಾಣದ ಬಳಿ ನಡೆದ ಬುಡಕಟ್ಟು ಸಮುದಾಯದ ಕಾರ್ಯಕ್ರಮದಲ್ಲಿ ಕಡಿಮೆ ಜನ ಸೇರಿದ ಬಗ್ಗೆ ರಾಷ್ಟ್ರಪತಿ ಮುರ್ಮು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಕಾರ್ಯಕ್ರಮವನ್ನು ಬಿಧಾನ್ ನಗರದಿಂದ ಬೇರೆಡೆಗೆ ಬದಲಾಯಿಸಿದ ನಿರ್ಧಾರವನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಅವರ ಸಂಪುಟ ಸದಸ್ಯರು ತಮ್ಮ ಭೇಟಿ ಸಂದರ್ಭದಲ್ಲಿ ಗೈರಾಗಿದ್ದನ್ನೂ ಅವರು ಪ್ರಶ್ನಿಸಿದ್ದರು.

ರಾಷ್ಟ್ರಪತಿಗಳು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಮುಖ್ಯಮಮ್ತ್ರಿಗಳು, ಮುಖ್ಯಕಾರ್ಯದರ್ಶಿ ಮತ್ತು ಡಿಜಿಪಿ ಹಾಜರಿರದಿರುವುದು ಬ್ಲೂ ಬುಕ್ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಇನ್ನೊಂದು ಮೂಲಗಲ ಪ್ರಕಾರ ರಾಷ್ಟ್ರಪತಿಗಳಿಗಾಇ ಸ್ಥಾಪಿಸಲಾಗಿದ್ದ ಶೌಚಾಲಯದಲ್ಲಿ ನೀರು ಇರಲಿಲ. ಈ ಬಗ್ಗೆ ರಾಜ್ಯ ಸರ್ಕಾರದಿಂದ ವಿವರಣೆ ಕೇಳಲಾಗಿದೆ.

Related Articles

Back to top button