*ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ*

ಪ್ರಗತಿವಾಹಿನಿ ಸುದ್ದಿ : ಪೊಲೀಸ್ ಇಲಾಖೆಗೆ ಸ್ವಾತಂತ್ರೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 1037 ಸೇವಾ ಪದಕವನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗೆ ಘೋಷಣೆ ಮಾಡಲಾಗಿದ್ದು, ಇದರಲ್ಲಿ 208 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ.
ಕರ್ನಾಟಕದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಯವರು ಪ್ರದಾನ ಮಾಡುವ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಐಪಿಎಸ್ ಅಧಿಕಾರಿ ಚಂದ್ರಶೇಖರ್ ಎಂ (ಎಡಿಜಿಪಿ, ಐಎಸ್‌ಡಿ, ಬೆಂಗಳೂರು) ಅವರು ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದ 18 ಪೊಲೀಸ್ ಅಧಿಕಾರಿಗಳು ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.
1. ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ, 2. ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, 3. ರಾಮಗೊಂಡ ಬಿ ಬಸರಗಿ, ಎಎಸ್‌ಪಿ, ಬಳ್ಳಾರಿ ಜಿಲ್ಲೆ, 4. ಎಂ.ಡಿ. ಶರತ್, ಪೊಲೀಸ್ ಅಧೀಕ್ಷಕರು, ಸಿಐಡಿ, ಬೆಂಗಳೂರು, 5. ವಿ.ಸಿ. ಗೋಪಾಲರೆಡ್ಡಿ, ಡಿಸಿಪಿ, ಸಿಆರ್, ಪಶ್ಚಿಮ, ಬೆಂಗಳೂರು ನಗರ, 6. ಗಿರಿ ಕೆ.ಸಿ, ಡಿವೈಎಸ್‌ಪಿ, ಚನ್ನಪಟ್ಟಣ ಉಪ-ವಿಭಾಗ, ರಾಮನಗರ ಜಿಲ್ಲೆ, 7. ಮುರಳೀಧರ್ ಪಿ, ಡಿವೈಎಸ್‌ಪಿ, ಚಿಂತಾಮಣಿ ಉಪ-ವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ, 8. ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ರಾಜ್ಯ ಗುಪ್ತವಾರ್ತೆ, ಕಲಬುರಗಿ, 9. ಕೆ. ಬಸವರಾಜು, ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ, 10. ರವೀಶ್ ನಾಯಕ್, ಎಸಿಪಿ, ಸಿಸಿಆರ್‌ಬಿ, ಮಂಗಳೂರು ನಗರ, 11. ಎನ್. ಮಹೇಶ್, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು, 12. ಪ್ರಭಾಕರ್ ಜಿ, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು ನಗರ, 13. ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್, 11ನೇ ಪಡೆ, ಕೆಎಸ್‌ಆರ್‌ಪಿ, ಹಾಸನ, 14. ಮಂಜುನಾಥ ಎಸ್. ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್, ಎಫ್‌ಪಿಬಿ, ದಾವಣಗೆರೆ, 15. ಎಸ್. ಮಂಜುನಾಥ, ಆರ್‌ಪಿಐ, 3ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು, 16. ಗೌರಮ್ಮ ಜಿ., ಎಎಸ್‌ಐ, ಸಿಐಡಿ, ಬೆಂಗಳೂರು, 17. ಮಹಬೂಬಸಾಹೇಬ ಎನ್ ಮುಜಾವರ್, ಸಿಎಚ್ ಸಿ, ಮನಗುಳಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ, 18. ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್, ಡಿಸಿಆರ್‌ಬಿ, ಉಡುಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ