13 ಕಡೆ ಬಂಡಾಯ ಭೇಗುದಿ ಮಧ್ಯೆಯೇ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯದ 13 ಕಡೆ ಕಾಂಗ್ರೆಸ್ ನಲ್ಲಿ ಭಿನ್ನಮತ ಬುಗಿಲೆದ್ದಿದೆ. ಅನೇಕ ಕಡೆ ಬಂಡಾಯದ ಮುನ್ಸೂಚನೆ ಸಿಕ್ಕಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ಕರೆದಿದ್ದು, ಕುತೂಹಲ ಮೂಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

Related Articles

ಪ್ರಮುಖವಾಗಿ ಕಡೂರಲ್ಲಿ ವೈ.ಎಸ್.ವಿ.ದತ್ತಾ, ಗೋಕಾಕಲ್ಲಿ ಅಶೋಕ ಪೂಜಾರಿ, ಸವದತ್ತಿಯಲ್ಲಿ ಸೌರವ್ ಚೋಪ್ರಾ, ಕಿತ್ತೂರಲ್ಲಿ ಲಕ್ಷ್ಮೀ ಇನಾಮದಾರ, ಶಿರಸಿಯಲ್ಲಿ ವೆಂಕಟೇಶ ಹೊಸಬಾಳೆ, ಚಿತ್ರದುರ್ಗದಲ್ಲಿ ರಘು ಆಚಾರ್, ಹಾನಗಲ್ ನಲ್ಲಿ ಮನೋಹರ ತಹಸಿಲ್ದಾರ, ಮಂಡ್ಯದಲ್ಲಿ ಕೆ.ಕೆ.ರಾಧಾಕೃಷ್ಣ, ಗಂಗಾವತಿಯಲ್ಲಿ ಎಚ್.ಆರ್.ಶ್ರೀನಾಥ, ಉಡುಪಿಯಲ್ಲಿ ಕೃಷ್ಣಮೂರ್ತಿ ಆಚಾರ್ಯ, ತುಮಕೂರಲ್ಲಿ ರಫೀಕ್ ಆಹ್ಮದ್, ಬಾದಾಮಿಯಲ್ಲಿ ಮಹೇಶ ಹೊಸಗೌಡರ್, ನರಗುಂದದಲ್ಲಿ ಸಂಗಮೇಶ ಕೊಳ್ಳಿ ಬಂಡಾಯ ಸಾರಿದ್ದಾರೆ. ಕೆಲವರು ಬೇರೆ ರಾಜಿನಾಮೆ ನೀಡಿದರೆ, ಕೆಲವರು ಬೇರೆ ಪಕ್ಷಗಳಿಂದ ಕಣಕ್ಕಿಳಿಯುವ ಬೆದರಿಕೆ ಹಾಕಿದ್ದಾರೆ.

ಈ ಮಧ್ಯೆ, 3ನೇ ಪಟ್ಟಿ ಬಿಡುಗಡೆಗೂ ಮುನ್ನ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಬಂಡಾಯವನ್ನು ಯಾವ ರೀತಿಯಲ್ಲಿ ಶಮನ ಮಾಡುತ್ತಾರೆ ಕಾದು ನೋಡಬೇಕಿದೆ. ಕೆಲವೆಡೆ ಬಂಡಾಯ ಮುಂದುವರಿದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

Home add -Advt
https://pragati.taskdun.com/rahul-gandhikolaravisitpostpone/
https://pragati.taskdun.com/no-unopposed-choice-only-wrestling/

Related Articles

Back to top button