ಬೆಂಗಳೂರು – ಫೆಡರೇಶನ್ ಆಫ್ ಇಂಡಿಯನ್ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (FICCI) ಕೊಡಮಾಡುವ ಪ್ರತಿಷ್ಠಿತ ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ್ಸ್ ಬೆಂಗಳೂರಿನ ಆರ್ಟಿಸ್ಟ್ (ಏಶಿಯನ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್) ಸಂಸ್ಥೆಗೆ ಲಭಿಸಿದೆ.
3 ದಿನಗಳ ಕಾಲ ವರ್ಚ್ಯುವಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ನಡೆದ ಎಫ್ಐಸಿಸಿಐನ ಸಮಾವೇಶದ ಅಂತಿಮ ದಿನವಾದ ಬುಧವಾರ 13ನೇ ಆವೃತ್ತಿಯ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಆರ್ಟಿಸ್ಟ್ ಸಿಇಒ ಡಾ.ಹೇಮಾ ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು.
ಅಪೋಲೋ, ಫೋರ್ಟೀಸ್ ಸೇರಿದಂತೆ ರಾಷ್ಟ್ರದ 5ಸಂಸ್ಥೆಗಳು ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದವು. ಅತ್ಯಂತ ಕಠಿಣವಾದ ಈ ಸ್ಪರ್ಧೆಯಲ್ಲಿ ಆರ್ಟಿಸ್ಟ್ ಪ್ರಶಸ್ತಿಗೆ ಆಯ್ಕೆಗೊಂಡಿದೆ ಎಂದು ಎಫ್ಐಸಿಸಿಐನ ಹೆಲ್ತ್ ಸರ್ವೀಸಸ್ ಕಮಿಟಿಯ ಚೇರಮನ್ ಹಾಗೂ ನಿರ್ಣಾಯಕರ ಸಮಿತಿಯ ಸಹ ಚೇರಮನ್ ಅಲೋಕ್ ರಾಯ್ ಘೋಷಿಸಿದರು.
ಪ್ರಶಸ್ತಿಗೆ ಆಯ್ಕೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಸಂಸ್ಥೆಗಳೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಸಲ್ಲಿಸಿವೆ. ಅಷ್ಟೊಂದು ಪೈಪೋಟಿಯ ನಡುವೆ ಆರ್ಟಿಸ್ಟ್ ಆಯ್ಕೆಯಾಗಿದೆ ಎಂದು ಎಫ್ಐಸಿಸಿಐ ನಿರ್ದೇಶಕ ಪ್ರವೀಣ್ ಕೆ ಮಿತ್ತಲ್ ತಿಳಿಸಿದರು.
ಈ ಪ್ರಶಸ್ತಿಗೆ ಆರ್ಟಿಸ್ಟ್ ಸಂಸ್ಥೆಯನ್ನು ಆಯ್ಕೆ ಮಾಡಿದ ಎಫ್ಐಸಿಸಿಐಗೆ ಹೇಮಲತಾ ದಿವಾಕರ್ ಧನ್ಯವಾದಗಳನ್ನು ಸಲ್ಲಿಸಿ, ನಮ್ಮ ಎಲ್ಲ ಚಾಂಪಿಯನ್ಸ್ ಮತ್ತು ಮಾಸ್ಟರ್ ಟ್ರೈನರ್‌ಗಳ ಪರವಾಗಿ ಪ್ರಶಸ್ತಿ ಸ್ವೀಕರಿಸುವುದಾಗಿ ತಿಳಿಸಿದರು.
ತಾಯಿ, ಮಗುವಿನ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಒಂದು ಮಿಲಿಯನ್ ಕಾರ್ಯಕರ್ತರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸಿದ ಡಾ.ಹೇಮಾ ದಿವಾಕರ್, ಮಹಿಳೆಯರ ಆರೋಗ್ಯ ರಕ್ಷಣೆಯ ಕೌಶಲ್ಯವನ್ನು ಭವಿಷ್ಯದ ದೃಷ್ಟಿಯಿಂದ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಮೂಲಕ ವರ್ಗಾಯಿಸುವ ಭರವಸೆ ನೀಡಿದರು.
ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇನ್ನಷ್ಟು ಜವಾಬ್ದಾರಿಯಿಂದ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಅವರು ಘೋಷಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ ಸಿಇಒಗಳು, ನೀತಿ ನಿರೂಪಕರು, ರಾಯಭಾರ ಕಚೇರಿಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಮತ್ತು ಸಂಬಂಧಿತ ಉದ್ಯಮಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಾಯಕರು ಪಾಲ್ಗೊಂಡಿದ್ದರು. ಆಸ್ಪತ್ರೆಗಳು, ಮೆಡ್‌ಟೆಕ್, ಡಯಾಗ್ನೋಸ್ಟಿಕ್ ಲ್ಯಾಬ್‌ಗಳು, ಡ್ರಗ್ಸ್ ಮತ್ತು ಫಾರ್ಮಾ, ಆರೋಗ್ಯ ವಿಮೆ, ಆರೋಗ್ಯ ರಕ್ಷಣೆ ಐಟಿ ಮತ್ತು ಡಿಜಿಟಲ್ ಆರೋಗ್ಯ ಹಾಗೂ ಸ್ಟಾರ್ಟ್ ಅಪ್‌ಗಳು ಭಾಗವಹಿಸಿದ್ದವು.
ಡಾ.ಹೇಮಾ ದಿವಾಕರ್ ಅವರಿಗೆ ಐಎಂಎ ಇಂದ ಪ್ರತಿಷ್ಠಿತ ಡಾಕ್ಟರ್ಸ್ ಡೇ ಅವಾರ್ಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ