ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಕ್ರೀದ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳ ಹತ್ಯೆಯಾಗುವ ಸಂಭವವಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಮನವಿ ಸಲ್ಲಿಸಿರುವ ಕಾರ್ಯಕರ್ತರು, ಬೆಳಗಾವಿಯಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಿನ ಹತ್ಯೆ ಮಾಡುವ ಸಂಭವ ಇದೆ. ನಮ್ಮ ಪದಾಧಿಕಾರಿಗಳು ಗಮನಿಸಿ ಎರಡು, ಮೂರು ತಿಂಗಳಲ್ಲಿ ಸುಮಾರು ಹದಿನೈದು ಗಾಡಿಗಳ ಗೋಮಾಂಸವನ್ನು ತಡೆದಿದ್ದಾರೆ. ಹತ್ತಾರು ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಬಿಟ್ಟಿದ್ದಾರೆ. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಗೋಹತ್ಯೆ ಆಗಲು ಅವಕಾಶ ನೀಡಬಾರದು. ಜಿಲ್ಲಾ ಆಡಳಿತ ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪದಾಧಿಕಾರಿಗಳಾದ ಜಿಲ್ಲಾ ಮಠ-ಮಂದಿರ ಪ್ರಮುಖ ಸತೀಶ್ ಮಾಳೋದೆ, ಸಹಕಾರ್ಯದರ್ಶಿ ಆನಂದ್ ಕರಲಿಂಗನ್ನವರ, ನಗರ ಸಂಯೋಜಕ ಆದಿನಾಥ್ ಗಾವಡೆ, ನಗರ ಕಾರ್ಯದರ್ಶಿ ಹೇಮಂತ್ ಹವಳ, ಖಜಾಂಚಿ ಅರ್ಜುನ್ ರಜ್ಪುತ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ