ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ನೀಡುವ ಔಷಧಗಳು ಸೇರಿದಂತೆ 74 ಔಷಧ, ಮಾತ್ರೆಗಳ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಹೇಳಿದೆ.
“ಫೆಬ್ರವರಿ 21ರಂದು ನಡೆದ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (NPPA)ಯ 109 ನೇ ಸಭೆಯ ನಿರ್ಧಾರದ ಆಧಾರದ ಮೇಲೆ ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013 ರ ಅಡಿಯಲ್ಲಿ ಬೆಲೆಗಳನ್ನು ನಿಗದಿಪಡಿಸಿದೆ” ಎಂದು NPPA ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಅಧಿಸೂಚನೆಯ ಮೂಲಕ ಡಪಾಗ್ಲಿಫ್ಲೋಜಿನ್ ಸಿಟಾಗ್ಲಿಪ್ಟಿನ್ ಮತ್ತು ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್ (ವಿಸ್ತರಿತ-ಬಿಡುಗಡೆ ಮಾತ್ರೆಗಳು) ಒಂದು ಮಾತ್ರೆಯ ಬೆಲೆಯನ್ನು 27.75 ರೂ.ಗೆ ನಿಗದಿಪಡಿಸಲಾಗಿದೆ. ರಕ್ತದೊತ್ತಡ ಕಡಿಮೆ ಮಾಡುವ ಟೆಲ್ಮಿಸಾರ್ಟನ್ ಮತ್ತು ಬಿಸೊಪ್ರೊರೊಲ್ ಫ್ಯೂಮರೇಟ್ ಒಂದು ಮಾತ್ರೆ ಬೆಲೆ 10.92 ರೂ.ಗೆ ನಿಗದಿಯಾಗಿದೆ.
ಸೋಡಿಯಂ ವಾಲ್‌ಪ್ರೊಯೇಟ್‌ನ ಒಂದು ಮಾತ್ರೆ (200mg) ಸೀಲಿಂಗ್ ಬೆಲೆಯನ್ನು 3.20 ರೂ.ಗೆ, ಅದೇ ರೀತಿ ಫಿಲ್ಗ್ರಾಸ್ಟಿಮ್ ಇಂಜೆಕ್ಷನ್ (ಒಂದು ಬಾಟಲಿ) ಸೀಲಿಂಗ್ ಬೆಲೆಯನ್ನು 1,034.51 ರೂ.ಗೆ ನಿಗದಿಪಡಿಸಲಾಗಿದೆ. ಹೈಡ್ರೋಕಾರ್ಟಿಸೋನ್ (20 ಮಿ.ಗ್ರಾಂ), ಸ್ಟೀರಾಯ್ಡ್ ನ ಒಂದು ಟ್ಯಾಬ್ಲೆಟ್ ಬೆಲೆ 13.28 ರೂ.ಗೆ ನಿಗದಿಯಾಗಿದೆ.
ಇದರೊಂದಿಗೆ ಅಪಸ್ಮಾರ ಮತ್ತು ನ್ಯೂಟ್ರೊಪೆನಿಯಾಗೆ ಚಿಕಿತ್ಸೆ ಬಳಕೆ ಸೇರಿದಂತೆ 80 ನಿಗದಿತ ಔಷಧಗಳ (NLEM 2022) ಸೀಲಿಂಗ್ ಬೆಲೆಯನ್ನು ಸಹ ಪರಿಷ್ಕರಿಸಲಾಗಿದೆ ಎಂದು NPPA ಹೇಳಿದೆ.
ಅನಿಯಂತ್ರಿತ ಔಷಧಿಗಳ ಬೆಲೆಗಳನ್ನು ಸಮಂಜಸವಾದ ಮಟ್ಟದಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ. ನಿಯಂತ್ರಕವು ಔಷಧಗಳ ಬೆಲೆಗಳ ನಿಯಂತ್ರಣ ಆದೇಶದ ನಿಬಂಧನೆಗಳನ್ನು ಜಾರಿಗೊಳಿಸುವುದಲ್ಲದೆ ನಿಯಂತ್ರಿತ ಔಷಧಿಗಳಿಗೆ ತಯಾರಕರು ಗ್ರಾಹಕರಿಂದ ಅಧಿಕವಾಗಿ ವಿಧಿಸುವ ಮೊತ್ತವನ್ನು ಮರುಪಡೆಯುವ ಕಾರ್ಯವನ್ನು ಸಹ ನಿರ್ವಹಿಸಲಿದೆ.
*ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಬಂದ್?*
https://pragati.taskdun.com/state-govt-employees7th-pay-commissioninterim-reportteachersprotest/
ಮುಷ್ಕರ ನಡೆಯುವುದು ಶತಸಿದ್ಧ; ವದಂತಿಗಳಿಗೆ ಕಿವಿಗೊಡದಿರಿ: ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ
https://pragati.taskdun.com/the-strike-is-inevitable-dont-listen-to-rumours-state-government-employees-union-president-c-s-shadakshari/
ಮೂವರು ಮಹನೀಯರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆ
https://pragati.taskdun.com/announcement-of-the-prestigious-pampa-award-of-the-state-government-to-three-gentlemen/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ