Latest

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಟಾಂಗಾ ರ್ಯಾಲಿ; ಕುದುರೆ ಟಾಂಗಾ ಮೂಲಕ ಅಧಿವೇಶನಕ್ಕೆ ಎಂಟ್ರಿಕೊಟ್ಟ’ ಕೈ’ ನಾಯಕರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ, ಸೈಕಲ್ ಜಾಥಾ ಬಳಿಕ ಇದೀಗ ಮೂರನೇ ಬಾರಿಗೆ ವಿನೂತನ ಪ್ರತಿಭಟನೆ ನಡೆಸುತ್ತಿದ್ದು, ಟಾಂಗಾ ಜಾಥಾ ನಡೆಸಿದೆ.

ವಿಧಾನಮಂಡಲ ಅಧಿವೇಶನದ ಕೊನೇ ದಿನವಾದ ಇಂದು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ಮತ್ತೊಮ್ಮೆ ಯತ್ನಿಸಿದ್ದು, ಕುದುರೆ ಟಾಂಗಾ ಏರಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೂ ಟಾಂಗಾ ಏರಿ ಪ್ರತಿಭಟನೆ ಮೂಲಕ ಆಗಮಿಸಿದ್ದಾರೆ.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಈಗಾಗಲೇ ಎರಡು ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆದರೂ ದಪ್ಪ ಚರ್ಮದ ಸರ್ಕಾರಕ್ಕೆ ತಲುಪುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಜನರ ರಕ್ತ ಹೀರುತ್ತಿದೆ. ಜನಸಾಮನ್ಯರ ಸಂಕಷ್ಟ ಆಲಿಸುವಂತೆ ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ನವರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾದರೆ ವಾಜಪೇಯಿ ಮಾಡಿದ್ದು ನಾಟಕವೇ? ನಾವು ಜನರ ದ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಗಮನ ಮತ್ತೊಮ್ಮೆ ಸೆಳೆಯುವ ನಿಟ್ಟಿನಲ್ಲಿ ಇಂದು ಟಾಂಗಾ ಮೂಲಕ ಅಧಿವೇಶನಕ್ಕೆ ತೆರಳುತ್ತಿದ್ದೇವೆ. ಬೆಲೆ ಇಳಿಕೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಹೇಳಿದರು.

Home add -Advt

ದಸರಾ, ದೀಪಾವಳಿಗೆ ರಾಜ್ಯದಲ್ಲಿ ಕೋವಿಡ್ ಟಫ್ ರೂಲ್ಸ್…!

Related Articles

Back to top button