ಪ್ರಗತಿವಾಹಿನಿ ಸುದ್ದಿ, ನವದೆಹಲಿ: ರಾಷ್ಟ್ರದ ರಾಜಧಾನಿಯ ಹವಾಮಾನ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಗಾಳಿಯ ಗುಣಮಟ್ಟ ಅಪಾಯಕಾರಿ ಹಂತ ತಲುಪಿರುವ ಹಿನ್ನೆಲೆಯಲ್ಲಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರಸ್ತುತ ದೆಹಲಿಯ ಹವಾಮಾನ ಸಿಗರೇಟ್ ಹೊಗೆಗಿಂತ ಮಾರಕವಾಗಿದೆ ಎಂದು ಏಮ್ಸ್ ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ತಂಬಾಕಿನ ಹೊಗೆಯಷ್ಟೇ ಅಪಾಯಕಾರಿಯಾಗಿರುವ ಈ ಹವೆ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ವಿಶ್ವದ ಅತ್ಯಂತ ಮಾಲಿನ್ಯ ಪೀಡಿತ ನಗರಗಳಲ್ಲಿ ದೆಹಲಿ ಕೂಡ ಅಗ್ರ ಸ್ಥಾನದಲ್ಲಿದ್ದು, ಗಾಳಿ ಗುಣಮಟ್ಟದ ಸೂಚ್ಯಂಕ (AQI) 447ರಷ್ಟು ದಾಖಲಾಗಿದೆ. ಸಮೀಕ್ಷೆಯೊಂದರ ಪ್ರಕಾದ 12 ಲಕ್ಷಕ್ಕೂ ಅಧಿಕ ಜನ ದೇಶದಲ್ಲಿ ವಾಯು ಮಾಲಿನ್ಯದಿಂದ ಸಾವು ಕಾಣುವಂತಾಗಿದೆ.
ಬೇಡಿಕೆ ಈಡೇರಿಸಲು ಆಗ್ರಹಿಸಿ ಸೈಕಲ್ ರ‍್ಯಾಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ