
ಪ್ರಗತಿವಾಹಿನಿ ಸುದ್ದಿ, ಧಾರವಾಡ: ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ನಡೆಯುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಜ.12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೇ, 7500 ಯುವಕರು ಪಥಸಂಚಲನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಉತ್ಸವದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು, ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳ ಸುಮಾರು 7,500 ಯುವ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಚಟುವಟಿಕೆಗಳು ಧಾರವಾಡದಲ್ಲಿ ನಡೆಯಲಿವೆ. 30 ಸಾವಿರ ಜನರು ಬರುವ ನಿರೀಕ್ಷೆ ಇದೆ. ಈಗಾಗಲೇ 5500 ಜನ ನೋಂದಾಯಿಸಿದ್ದಾರೆ.
ಅತಿಥಿಗಳಿಗೆ ಕೆಸಿಡಿ, ಕೆಯುಡಿ ಹಾಗೂ ಕೃಷಿ ವಿವಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಂದು ಇಲಾಖೆಗೆ ಒಂದೊಂದು ಜವಾಬ್ದಾರಿ ಕೊಟ್ಟಿದ್ದು, ಅಚ್ಚುಕಟ್ಟು ಉತ್ಸವ ಆಯೋಜನೆಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ ಎಂದರು.
ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ ವಾಗ್ದಾಳಿ
https://pragati.taskdun.com/bjp-is-a-factory-of-lies-siddaramaiah-lashed-out/
ಫೆ. 17ರಂದು ರಾಜ್ಯ ಬಜೆಟ್: ಮುಖ್ಯಮಂತ್ರಿ ಬೊಮ್ಮಾಯಿ
https://pragati.taskdun.com/karnataka-state-budget-on-feb-17th-chief-minister-bommai/
ಸ್ಮಶಾನ ಕಾರ್ಮಿಕರು ಇನ್ನು ಸತ್ಯ ಹರಿಶ್ಚಂದ್ರ ಬಳಗ : ಸಿಎಂ ಬಸವರಾಜ ಬೊಮ್ಮಾಯಿ
https://pragati.taskdun.com/graveyard-workers-are-now-satya-harishchandra-balaga-cm-basavaraja-bommai/