Kannada NewsKarnataka NewsLatest
ಪ್ರಧಾನಿ ಮೋದಿ ಬೆಳಗಾವಿಯಲ್ಲಿ ಸೋಮವಾರ ಉದ್ಘಾಟನೆ, ಶಂಕುಸ್ಥಾಪನೆ ನಡೆಸಲಿರುವ ಯೋಜನೆಗಳು ಏನೇನು ಗೊತ್ತೇ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಾವಿ ನಗರದಲ್ಲಿ ಸೋಮವಾರ ನಡೆಸಲಿರುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ವಿವರ ಇಲ್ಲಿದೆ.
1. ಕಿಸಾನ್ ಸಮ್ಮಾನ್ ಯೋಜನೆ:(ಒಟ್ಟು ರೂ.16000 ಕೋಟಿ)
ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಮಾನ್ಯ ಪ್ರಧಾನಮಂತ್ರಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ/ವರ್ಗಾವಣೆ ಮಾಡಲಿದ್ದಾರೆ.
* ದೇಶದ ಒಟ್ಟು 8 ಕೋಟಿ ರೈತರ ಖಾತೆಗೆ ತಲಾ 2 ಸಾವಿರದಂತೆ 16 ಸಾವಿರ ಕೋಟಿ ರೂಪಾಯಿ.
* ಇದರಲ್ಲಿ ಕರ್ನಾಟಕ ರಾಜ್ಯದ 49.55 ರೈತರಿಗೆ 991 ಕೋಟಿ ರೂಪಾಯಿ ಮತ್ತು ಬೆಳಗಾವಿ ಜಿಲ್ಲೆಯ 5.10 ಲಕ್ಷ ರೈತರ ಖಾತೆಗೆ 102 ಕೋಟಿ ರೂಪಾಯಿಗಳನ್ನು ಪ್ರಧಾನಮಂತ್ರಿಗಳು ವರ್ಗಾವಣೆ ಮಾಡಲಿದ್ದಾರೆ.
—————————— —————————-
2. ಜಲಜೀವನ ಮಿಷನ್ ಯೋಜನೆ (ಒಟ್ಟು ರೂ.1120 ಕೋಟಿ)
ಜಲಜೀವನ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 1120 ಕೋಟಿ ರೂಪಾಯಿ ವೆಚ್ಚದ ವಿವಿಧ ತಾಲ್ಲೂಕುಗಳ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
A. ಬೆಳಗಾವಿ ತಾಲ್ಲೂಕಿನ ಹಾಲಬಾವಿ ಮತ್ತು ಇತರೆ ಗ್ರಾಮಗಳ ಕುಡಿಯುವ ನೀರು ಯೋಜನೆ: ಅಂದಾಜು ಮೊತ್ತ ರೂ. 30 ಕೋಟಿಗಳಾಗಿದ್ದು, 9 ಗ್ರಾಮಗಳ 14,337 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
B. ಸವದತ್ತಿ ತಾಲೂಕಿನ ಯರಝರ್ವಿ ಇತರೆ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ: ಅಂದಾಜು ಮೊತ್ತ ರೂ. 410 ಕೋಟಿಗಳಾಗಿದೆ. ಬೆಳಗಾವಿ, ಸವದತ್ತಿ, ಬೈಲಹೊಂಗಲ ಹಾಗೂ ಕಿತ್ತೂರು ತಾಲ್ಲೂಕುಗಳ ಒಟ್ಟು 108 ಗ್ರಾಮಗಳ 2,49,574 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
C. ಕಿತ್ತೂರು-ಖಾನಾಪುರ ತಾಲ್ಲೂಕಿನ ದೇಗಾಂವ ಮತ್ತು ಇತರೆ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ: ಅಂದಾಜು ಮೊತ್ತ ರೂ. 565 ಕೋಟಿಗಳಾಗಿದೆ. ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳ ಒಟ್ಟು 121 ಗ್ರಾಮಗಳ 2,27,703 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
D. ಅಥಣಿ ತಾಲ್ಲೂಕಿನ ಸತ್ತಿ ಮತ್ತು ಇತರೆ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ: ಅಂದಾಜು ಮೊತ್ತ ರೂ. 71 ಕೋಟಿಗಳಾಗಿದೆ. ಅಥಣಿ ತಾಲ್ಲೂಕಿನ ಒಟ್ಟು 9 ಗ್ರಾಮಗಳ 75,675 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
E. ಅಥಣಿ ತಾಲ್ಲೂಕಿನ ಚಿಕ್ಕೂಡ ಇತರೆ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ: ಅಂದಾಜು ಮೊತ್ತ ರೂ. 43.74 ಕೋಟಿಗಳಾಗಿದೆ. ಅಥಣಿ ತಾಲ್ಲೂಕಿನ ಒಟ್ಟು 8 ಗ್ರಾಮಗಳ 33,225 ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.
—————————— —————————— ———-
3. ರೈಲ್ವೆ ಇಲಾಖೆಯ ಕಾಮಗಾರಿಗಳ ವಿವರ(ಒಟ್ಟು ರೂ.1122 ಕೋಟಿ)
* ಬೆಳಗಾವಿ ನಗರದಲ್ಲಿ 190 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿರುವ ರೈಲುನಿಲ್ದಾಣದ ಲೋಕಾರ್ಪಣೆ.
* ಲೋಂಡಾ-ಬೆಳಗಾವಿ-ಘಟಪ್ರಭಾ ನಡುವಿನ 109 ಕಿ.ಮೀ. ಉದ್ದದ ರೈಲು ಡಬ್ಲಿಂಗ್ ಮಾರ್ಗದ ಲೋಕಾರ್ಪಣೆ
https://pragati.taskdun.com/here-is-the-complete-details-of-prime-minister-narendra-modis-belgaum-program/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ