Belagavi NewsBelgaum NewsElection NewsKannada NewsKarnataka NewsPolitics

ಪ್ರಧಾನಿ ಭೇಟಿ: ಬೆಳಗಾವಿಯಲ್ಲಿ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗಾವಿಗೆ ಆಗಮಿಸಿ ಭಾನುವಾರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬೆಳಗಾವಿ ನಗರದಲ್ಲಿ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಶನಿವಾರ ಸಂಜೆ ಹಾಗೂ ಭಾನುವಾರ ಮಧ್ಯಾಹ್ನದವರೆಗೆ ಬೆಳಗಾವಿ ನಗರದ ಆಯ್ದ ಮಾರ್ಗಗಳಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಿಳಿಸಲಾಗಿದೆ.

೧) ದಿನಾಂಕ: ೨೭/೦೪/೨೦೨೪ ರಂದು ಸಾಯಂಕಾಲ ಬಾಗಲಕೋಟ ರಸ್ತೆ ಹಾಗೂ ಸುವರ್ಣ ವಿಧಾನಸೌಧದಿಂದ ಹೊನಗಾವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ದಿನಾಂಕ: ೨೮/೦೪/೨೦೨೪ ರಂದು ಹೊನಗಾ ದಿಂದ ಸುವರ್ಣ ವಿಧಾನಸೌಧ ವರೆಗಿನ ರಾಷ್ಟ್ರೀಯ ಹೆದ್ದಾರಿ, ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಬಾಗಲಕೋಟ ರಸ್ತೆಗಳ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರದಲ್ಲಿ ತೊಡಕುಂಟಾಗುವ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸಿಕೊಳ್ಳುವುದು.
೨) ಕೊಲ್ಹಾಪೂರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ಎಲ್ಲ ವಾಹನಗಳು ಸಂಕೇಶ್ವರದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳುವುದು.
೩) ಎಮ್. ಕೆ. ಹುಬ್ಬಳ್ಳಿ, ಧಾರವಾಡ ಕಡೆಗಳಿಂದ ಬೆಳಗಾವಿ ನಗರ ಮೂಲಕ ಸಂಚರಿಸುವ ವಾಹನಗಳು ನೇಗಿನಹಾಳ, ನೇಸರಗಿ/ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು.
೪) ನಿಪ್ಪಾಣಿ, ಕೊಲ್ಹಾಪೂರ, ಯಮಕನಮರ್ಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ರಾಮ ಡಾಭಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸುವುದು.
೫) ಬಾಗಲಕೋಟ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ ಮಾರ್ಗವಾಗಿ ಸಂಚರಿಸುವುದು.
೬) ಬಾಗಲಕೋಟ, ರಾಯಚೂರು, ಯರಗಟ್ಟಿ ಮಾರ್ಗಗಳಲ್ಲಿ ಸಂಚರಿಸುವ ವಾ.ಕ.ರ.ಸಾ.ಸಂಸ್ಥೆಯ ಬಸ್‌ಗಳು ಕನಕದಾಸ ಸರ್ಕಲ್, ಕಣಬರಗಿ, ಖನಗಾಂವ ಸುಳೇಬಾವಿ, ಮಾರಿಹಾಳ ಪೊಲೀಸ್ ಠಾಣಾ ಕ್ರಾಸ್ ಮೂಲಕ ಬಾಗಲಕೋಟ ರಸ್ತೆಗೆ ಸಂಚರಿಸುವುದು.
೭) ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳುವುದು.
೮) ದಿನಾಂಕ: ೨೭/೦೪/೨೦೨೪ ರಂದು ಸಾಯಂಕಾಲ ಹಾಗೂ ದಿನಾಂಕ: ೨೮/೦೪/೨೦೨೪ ರಂದು ಮದ್ಯಾಹ್ನದವರೆಗೆ ಎಲ್ಲ ಭಾರಿ ಹಾಗೂ ಮಧ್ಯಮ ಗಾತ್ರದ ವಾಹನಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

೯) ಕಾರ್ಯಕ್ರಮಕ್ಕೆ ಬರುವ ವಾಹನಗಳ ನಿಲುಗಡೆ ಸ್ಥಳಗಳು:
I. ಪಾರ್ಕಿಂಗ್-೧ (ಜ್ಯೋತಿ ನಗರ, ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲಾ ಹತ್ತಿರ): ಬೆಳಗಾವಿ ನಗರದಿಂದ ಬರುವ ವಾಹನಗಳು
II. ಪಾರ್ಕಿಂಗ್-೨ (ಹಲಗಾ-ಮಚ್ಛೆ ಬೈಪಾಸ್ ರಸ್ತೆ): ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ಸಂಕೇಶ್ವರ, ಹುಕ್ಕೇರಿ ಭಾಗಗಳಿಂದ ಬರುವ ವಾಹನಗಳು.
III. ಪಾರ್ಕಿಂಗ್-೩ (ಅಲಾರವಾಡ ಸರ್ವಿಸ್ ರಸ್ತೆಯ ಪಶ್ಚಿಮ ಬದಿ): ಬೈಲಹೊಂಗಲ, ಬಾಗೇವಾಡಿ, ರಾಮದುರ್ಗ, ಸೌಂದತ್ತಿ ಭಾಗಗಳಿಂದ ಬರುವ ವಾಹನಗಳು.
Iಗಿ. ಪಾರ್ಕಿಂಗ್-೪ (ಅಲಾರವಾಡ ಸರ್ವಿಸ್ ರಸ್ತೆಯ ಪೂರ್ವ ಬದಿ): ಗೋಕಾಕ, ಅರಭಾಂವಿ, ಘಟಪ್ರಭಾ ಭಾಗಗಳಿಂದ ಬರುವ ವಾಹನಗಳು

ಈ ಮೇಲ್ಕಂಡ ಸ್ಥಳಗಳಲ್ಲಿಯೇ ವಾಹನ ನಿಲುಗಡೆ ಮಾಡಲು ಹಾಗೂ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button