ರಾಜಕೀಯ ಸಭೆ ಸಮಾರಂಭಗಳಿಗೆ ಪೂರ್ವಾನುಮತಿ ಕಡ್ಡಾಯ: ಶಕೀಲ ಅಹಮ್ಮದ
ಲೋಕಸಭೆ ಚನಾವಣೆ-೨೦೨೪
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಅ-vigiಟ ಂಠಿಠಿ ತಂತ್ರಾಂಶವನ್ನು ಬಳಸಿಕೊಂಡು ದೂರು ದಾಖಲಿಸಬಹುದಾಗಿರುತ್ತದೆ. ರಾಜಕೀಯ ಸಭೆ ಸಮಾರಂಭಗಳಿಗೆ SUಗಿIಆಊಂ ಂಠಿಠಿ ತಂತ್ರಾಂಶದಲ್ಲಿ ಮಾತ್ರ ಅರ್ಜಿ ದಾಖಲಿಸಿ ಪರವಾನಿಗೆ ಪಡೆಯಬೇಕಾಗಿರುವುದರಿಂದ ಕಾರ್ಯಕ್ರಮ ನಡೆಯುವ ೪೮ ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಹಾಗೂ ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಕೀಲ ಅಹಮ್ಮದ ಅವರು ತಿಳಿಸಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿ (ಹಳೆ ಪಾಲಿಕೆ ಕಟ್ಟಡ) ಮಂಗಳವಾರ (ಮಾ.೧೯) ನಡೆದ ಲೋಕಸಭೆ ಚುನಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
೨೦೨೪ ನೇ ಲೋಕಸಭಾ ಸಾರ್ವತ್ರಿಕಾ ಚುನಾವಣೆಗೆ ಸಂಬಂಧಿಸಿದಂತೆ ನವದೆಹಲಿಯ ಭಾರತ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ನಿಗದಿಪಡಿಸಿದಂತೆ ಬೆಳಗಾವಿ-೦೨ ಲೋಕಸಭಾ ಕ್ಷೇತ್ರ, ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಾ.೧೬ ರಿಂದ ಜೂ.೬ ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
ಬೆಳಗಾವಿ-೦೨ ಲೋಕಸಭಾ ಕ್ಷೇತ್ರ, ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಾರ್ಯಾಲಯವನ್ನು ತಹಶೀಲ್ದಾರ ಕಚೇರಿ ಕಚೇರಿ, ೧ನೇ ಮಹಡಿ, ಹಳೇ ಮಹಾನಗರ ಪಾಲಿಕೆ ಕಟ್ಟಡ, ರಿಸಲ್ದಾರ ಗಲ್ಲಿ, ಬೆಳಗಾವಿ ಇಲ್ಲಿ ಸ್ಥಾಪಿಸಲಾಗಿರುತ್ತದೆ ಎಂದು ಹೇಳಿದರು.
ಜ. ೨೨ ರಂದು ಪ್ರಕಟಗೊಂಡ ಮತದಾರರ ಪಟ್ಟಿಯನುಸಾರ ಒಟ್ಟು ೨೯೪ ಮತಗಟ್ಟೆ ಇದ್ದು. ಮತದಾರರು ಪುರುಷ: ೧೩೧೮೧೩, ಮಹಿಳಾ: ೧೩೦೭೬೬ ಹಾಗೂ ತೃತೀಯ ಲಿಂಗ: ೧೦ ಒಟ್ಟು: ೨೬೨೫೮೯ ಹಾಗೂ ಪುರುಷ: ೨೧೮೩, ಮಹಿಳಾ: ೫೨ ಒಟ್ಟು: ೨೨೩೫ ಸೇವಾ ಮತದಾರರು ಇರುತ್ತಾರೆ. ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಒಟ್ಟು ೨೫ ಸೆಕ್ಟರ್ ಅಧಿಕಾರಿಗಳು, ೪ ಎಫ್.ಎಸ್.ಟಿ.ತಂಡಗಳು, ೦೨-ವ್ಹಿ.ಎಸ್.ಟಿ. ತಂಡಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿಯೋಜಿಸಿ ಆದೇಶಿಸಿರುತ್ತಾರೆ.
ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೧)ಬಾಚಿ, ೨)ಬೆಕ್ಕಿನಕೇರಿ ಹಾಗೂ ೩)ರಾಕಸಕೊಪ್ಪ ಈ ರೀತಿ ಒಟ್ಟು ೦೩ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿರುತ್ತದೆ. ೮೫+ ವರ್ಷ ಮೇಲ್ಪಟ್ಟ (ಂಗಿSಅ) ಹಾಗೂ ವಿಕಲಚೇತನ (ಂಗಿPಆ) ಮತದಾರರನ್ನು ಇಐಇಅಖಿಔಓಇ ತಂತ್ರಾಂಶದ ಮೂಲಕ ಗುರುತಿಸಲಾಗುತ್ತಿದ್ದು ಸದರಿ ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ಜರುಗಿಸಲಾಗುವುದು ಎಂದು ಹೇಳಿದರು.
ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಯನ್ನು ವನಿತಾ ವಿಧ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕ್ಲಬ್ ರೋಡ ಬೆಳಗಾವಿಯಲ್ಲಿ ನಡೆಸಲಾಗುವುದು.
ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿಸಂತೆ ಮತಯಂತ್ರಗಳ ಭದ್ರತಾ ಕೊಠಡಿ ಹಾಗೂ ಮತಯಂತ್ರಗಳ ತಯಾರಿಕೆ ವನಿತಾ ವಿಧ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕ್ಲಬ ರೋಡ ಬೆಳಗಾವಿಯಲ್ಲಿ ನಡೆಸಲಾಗುವುದು. ಯಾವುದೇ ದೂರು ಹಾಗೂ ಸಲಹೆಗಳಿದ್ದಲ್ಲಿ ದೂರವಾಣಿ ಸಂಖ್ಯೆ: ೦೮೩೧-೨೪೦೭೨೮೬ ಸಂಪರ್ಕಿಸಬಹುದು ಎಂದು ಬೆಳಗಾವಿ-೧೩ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಕೀಲ ಅಹಮ್ಮದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ತಹಶೀಲ್ದಾರ್ ಸಿದ್ದರಾಯ ಭೋಸಗಿ ಅವರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ