Karnataka News

*ಎಸೆನ್ಸ್ ಸೇವಿಸಿದ್ದ ಓರ್ವ ಕೈದಿ ಸಾವು: ಇಬ್ಬರು ಕೈದಿಗಳ ಸ್ಥಿತಿ ಗಂಭಿರ*

ಪ್ರಗತಿವಾಹಿನಿ ಸುದ್ದಿ: ಕೇಕ್ ತಯಾರಿಕೆಗೆ ಬಳಸುತ್ತಿದ್ದ ಎಸೆನ್ಸ್ ನ್ನು ಕಿಕ್ ಬರಲೆಂದು ಕುಡಿದು ಕೈದಿಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜೈಲಿನಲ್ಲಿ ಹೊಸ ವರ್ಷದ ವೇಳೆ ಕೇಕ್ ತಯಾರಿಸಲೆಂದು ಎಸೆನ್ಸ್ ತರಿಸಲಾಗಿತ್ತು. ಕೇಕ್ ತಯಾರಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೈದಿಗಳು ಕಿಕ್ ಗಾಗಿ ಎಸೆನ್ಸ್ ಸೇವಿಸಿದ್ದಾರೆ. ಮುವರು ಕೈದಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರಲ್ಲಿ ಓರ್ವ ಕೈದಿ ಮೃತಪಟ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತ ಕೈದಿ. ರಮೇಶ್ ಹಾಗೂ ನಾಗರಾಜ್ ಎಂಬ ಇಬ್ಬರು ಕೈದಿಗಳ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

Related Articles

Back to top button