Belagavi NewsBelgaum NewsKarnataka NewsLatest

*ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ತಪ್ಪಿಸಿಕೊಂಡಿದ್ದ ಕೈದಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಬಾತ್ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡು, ಮತ್ತೆ ಅರೆಸ್ಟ್ ಆಗಿದ್ದಾನೆ.

ಪೋಕ್ಸೋ ಕೇಸ್ ನಲ್ಲಿ ಶಿಕ್ಷೆಗೆ ಒಳಪಟ್ಟ ಕೈದಿ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದ‌. ಈ  ವೇಳೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಓಡಿಹೋಗಿದ್ದ ಕೈದಿಯನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

ಈ ಆರೋಪಿ ಪೋಕ್ಸೋ ಕೇಸ್ ನಲ್ಲಿ 20ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿ ಹಿಂಡಲಗಾ ಜೈಲಿನಲ್ಲಿದ್ದ. ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಕೈದಿ.

ಅನಾರೋಗ್ಯ ಹಿನ್ನೆಲೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕರೆತಂದಾಗ ಈ ಘಟನೆ ಸಂಭವಿಸಿದೆ. ನಿನ್ನೆ ಬೆಳಿಗ್ಗೆ 8.35ಕ್ಕೆ ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ಕೈದಿ ಅನಿಲ್ ತಪ್ಪಿಸಿಕೊಂಡು ಹೋಗಿದ್ದ. ಬೆಳಿಗ್ಗೆಯಿಂದಲೂ ನಿರಂತರವಾಗಿ ಹಿಂಡಲಗಾ ಜೈಲಿನ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.‌

Home add -Advt

ಇಡೀ ದಿನ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲೇ ಅಡಗಿಕೊಂಡು ಸಂಜೆ 6 ಗಂಟೆ ಸಮಯದಲ್ಲಿ ಹೋಡಿಹೋಗಲು ಪ್ಲಾನ್ ಮಾಡಿದ್ದಾನೆ. ಓಡಿಹೋಗುವಾಗ ಕೋರ್ಟ್ ಆವರಣದ ಪಕ್ಕದಲ್ಲಿ ಕೈದಿಯನ್ನು ಮರಳಿ ಹಿಂಡಲಗಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Related Articles

Back to top button