ಕೊರೋನಾ 3ನೇ ಅಲೆ ತಡೆಯಲು ಖಾಸಗಿ ಆಸ್ಪತ್ರೆಗಳ ಕಾರ್ಯತಂತ್ರ: ಡಾ.ಹೇಮಾ ದಿವಾಕರ ಅಧ್ಯಕ್ಷತೆಯಲ್ಲಿ ತಜ್ಞರ ತಂಡ ನೇಮಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕದಲ್ಲಿ ಕೋವಿಡ್-೧೯ರ ಮೂರನೇ ಅಲೆ ತಡೆಯಲು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಸಂಘಟನೆ -ಫನ (ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್) ಮುಂದಾಗಿದ್ದು, ಹಲವು ಕಾರ್ಯತಂತ್ರದ ಅನುಷ್ಠಾನಕ್ಕೆ ನಿರ್ಧರಿಸಿದೆ.
ಫನ ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ. ಮತ್ತು ಕಾರ್ಯದರ್ಶಿ; ಡಾ. ರಾಜಶೇಖರ್ ವೈ. ಎಲ್. ಅವರ ನೇತೃತ್ವದಲ್ಲಿ ಈ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದ್ದು, ಆರೋಗ್ಯಸೇವಾ ಕ್ಷೇತ್ರದ ಮುಂಚೂಣಿಯ ವೈದ್ಯೆ ಡಾ. ಹೇಮಾ ಅವರನ್ನು ತಜ್ಞರ ತಂಡದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಡಾ. ಪ್ರಸನ್ನ ಎಚ್.ಎಂ., ಡಾ. ರಾಜಶೇಖರ್ ವೈ. ಎಲ್. ಮತ್ತು ಡಾ.ಹೇಮಾ ಈ ಕುರಿತು ಬೆಳಗಾವಿಯಲ್ಲಿ ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಲಸಿಕೆಯ ಸಮರ್ಪಕ ಬಳಕೆ, ಸಂಶೋಧನೆ -ಸಂಪರ್ಕಿತ ದತ್ತಾಂಶ ದಾಖಲೀಕರಣ ಮತ್ತು ಆರೋಗ್ಯಸೇವಾ ಕಾರ್ಯಕರ್ತರಿಗೆ ಪರಿಣಾಮಕಾರಿ ತರಬೇತಿಯನ್ನು ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಒದಗಿಸಲಾಗುತ್ತದೆ.
ಡಾ. ಹೇಮಾ ಅವರ ನೇತೃತ್ವದ ತಜ್ಞರ ತಂಡದಲ್ಲಿ ಫನದ ಪದಾಧಿಕಾರಿಗಳು ಮತ್ತು ವೈರಾಲಜಿ, ಎಪಿಡಮಿಯೊಲಜಿ ಮತ್ತು ಪಲ್ಮನಾಲಜಿಸ್ಟ್ ಹಾಗೂ ಮಕ್ಕಳ ತಜ್ಞರು ಒಳಗೊಂಡಿದ್ದು, ಎಲ್ಲರೂ ಸೇರಿ ಕಾರ್ಯೊನ್ಮುಖರಾಗಿದ್ದಾರೆ.
ಪ್ರಸ್ತುತದ ಅಗತ್ಯವು ದೂರದೃಷ್ಟಿ, ಕ್ರಿಯಾಶೀಲ ಕಾರ್ಯಚಟುವಟಿಕೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿದೆ. ಕೊರೋನೋ ನಿಯಂತ್ರಣದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೊಂದಿಗೆ ಖಾಸಗಿ ವಲಯದ ಪಾತ್ರವು ಬಹಳ ಮುಖ್ಯವಾಗಿದೆ. ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಈ ಸಂದರ್ಭದಲ್ಲಿ ಮುಂದಿನ ಅಲೆಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗುವ ಅಗತ್ಯವಿದೆ. ಆದ್ದರಿಂದ ತುರ್ತು ಅಲ್ಲದ ಈ ಅವಧಿಯಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮತ್ತು ಈಗ ಕ್ರಮ ಕೈಗೊಳ್ಳುವ ಮೂಲಕ ಸನ್ನದ್ಧರಾಗಿರಬಹುದು ಎಂದು ಆರ್ಟಿಸ್ಟ್ (ARTIST) ಫಾರ್ ಹರ್ನ ಸಿಇಒ ಮತ್ತು ಫೊಗ್ಸಿ (FOGSI) ಯ ಮಾಜಿ ಅಧ್ಯಕ್ಷೆಯೂ ಆಗಿರುವ ಡಾ. ಹೇಮಾ ದಿವಾಕರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ನಗರಗಳು ಮತ್ತು ಪಟ್ಟಣಗಳಲ್ಲಿ ಲಸಿಕಾ ನೀಡಿಕೆ ಉಪಕ್ರಮಗಳಿಗೆ ಹಬ್ ಅಂಡ್ ಸ್ಪೋಕ್ ಮಾಡೆಲ್ ಅನುಸರಿಸುವ ಅಗತ್ಯವಿದೆ. ಈ ಮಾದರಿಯನ್ನು ಮೊದಲ ಹಂತದ ಲಸಿಕೆ ನೀಡಿಕೆಯಲ್ಲಿ ಅನುಸರಿಸಲಾಗಿತ್ತು. ಇದರಿಂದ ಫಲಿತಾಂಶಗಳು ಪರಿಣಾಮಕಾರಿಯಾಗಿದ್ದವು ಎಂದು ಫನ ಅಧ್ಯಕ್ಷ ಡಾ.ಪ್ರಸನ್ನ ಎಚ್ಎಂ ತಿಳಿಸಿದ್ದಾರೆ.
ನಿರ್ದಿಷ್ಟ ಆಸ್ಪತ್ರೆಗಳನ್ನು ಲಸಿಕಾ ಕೇಂದ್ರಗಳಾಗಿ ನೇಮಕ ಮಾಡಿದಾಗ ಹತ್ತಿರದ ಆಸ್ಪತ್ರೆಗಳು ಪ್ರಚಾರವನ್ನು ಕೈಗೊಳ್ಳುತ್ತವೆ. ಎಲ್ಲ ಆಸ್ಪತ್ರೆಗಳೂ ಲಸಿಕೆಯ ಕುರಿತ ಹಿಂಜರಿಕೆಯನ್ನು ಒಂದೇ ಧ್ವನಿಯಲ್ಲಿ ನಿವಾರಿಸುತ್ತವೆ. ಇದರೊಂದಿಗೆ ಕಾರ್ಪೊರೇಟ್ ವಲಯ, ಕೈಗಾರಿಕೆಗಳು ಮತ್ತು ಎಸ್ಎಂಇಸಿ ವಲಯಗಳು ಸೂಚಿತ ಲಸಿಕಾ ಕೇಂದ್ರಗಳ (ಆಸ್ಪತ್ರೆಗಳು) ಸಹಯೋಗದಲ್ಲಿ ದೊಡ್ಡ ಪ್ರಮಾಣದ ಲಸಿಕೆಯ ಉಪಕ್ರಮಗಳನ್ನು ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ಎರಡನೆಯದಾಗಿ, ದತ್ತಾಂಶ ದಾಖಲೀಕರಣದ ವಿಧಾನವನ್ನು ಸುಸೂತ್ರಗೊಳಿಸಲು ಅಗತ್ಯವಾಗಿದೆ. ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್-೧೯ಕೇಸ್ ಶೀಟ್ನ ಸಾಮಾನ್ಯ ಟೆಂಪ್ಲೇಟ್ ಮತ್ತು ಬಣ್ಣ-ಸೂಚಿತ ದಾಖಲೆಯನ್ನು ಬಳಸಬೇಕು. ಇದು ಕೋವಿಡ್-೧೯ ಸಂಬಂಧಿತ ಮಾಹಿತಿಯನ್ನು ನಿಖರವಾಗಿ ಹಾಗೂ ಭೌತಿಕವಾಗಿ ಮತ್ತು ಎಲೆಕ್ಟ್ರಾನಿಕ್ ವರ್ಗಾವಣೆಗಳ ಮೂಲಕ ರಾಜ್ಯದ ನೋಡಲ್ ಕೇಂದ್ರಗಳಿಗೆ ವಿತರಿಸಲು ನೆರವಾಗುತ್ತದೆ ಫನ ಕಾರ್ಯದರ್ಶಿ ಡಾ. ರಾಜಶೇಖರ್ ವೈ. ಎಲ್. ಹೇಳಿದ್ದಾರೆ..
ಸೋಂಕುಗಳ ಹೆಚ್ಚಳವನ್ನು ಪ್ರಾರಂಭದಲ್ಲೇ ಪತ್ತೆ ಮಾಡುವುದು ಮತ್ತು ಪ್ರಾರಂಭದಲ್ಲೇ ಕ್ರಮ ಕೈಗೊಳ್ಳುವುದು ಮುಂದಿನ ಅಲೆ ಪ್ರಾರಂಭವಾಗುವ ಮುನ್ನವೇ ಅದನ್ನು ಹತ್ತಿಕ್ಕಲು ಏಕೈಕ ದಾರಿಯಾಗಿದೆ. ನಾವು ಪ್ರಕರಣಗಳು, ಆಸ್ಪತ್ರೆವಾಸಗಳು, ಮರಣ, ಸೋಂಕಿನ ಪ್ರಮಾಣ, ಆರ್ ಓ (ಪ್ರತಿ ಪ್ರಕರಣದಿಂದ ಉಂಟಾದ ಹೊಸ ಸೋಂಕುಗಳು) ಮತ್ತು ಸಕಾಲಿಕವಾಗಿ ಜನರಲ್ಲಿನ ರೋಗಕಾರಕಗಳಾದ ಪ್ರಮುಖ ಸೂಚಕಗಳನ್ನು ನಿಖರವಾಗಿ ದಾಖಲಿಸುವ ವ್ಯವಸ್ಥೆಗಳನ್ನು ಒಂದೆಡೆ ಇರಿಸಬೇಕಾಗುತ್ತದೆ. ಇದು ಪ್ರಾರಂಭಿಕ ಪತ್ತೆಗೆ ಅತ್ಯಂತ ಮುಖ್ಯವಾಗಿದೆ ಎಂದು ಡಾ. ರಾಜಶೇಖರ್ ವೈ. ಎಲ್. ತಿಳಿಸಿದ್ದಾರೆ.
ಮೂರನೆಯದಾಗಿ, ಎಲ್ಲ ಆರೋಗ್ಯಸೇವಾ ಕಾರ್ಯಕರ್ತರಿಗೆ ಆರೈಕೆಯ ಅತ್ಯಾಧುನಿಕ ರೂಢಿಗಳು ಮತ್ತು ಮಾರ್ಗಸೂಚಿಗಳ ತರಬೇತಿ ನೀಡಲು ಸೂಚಿಸಲಾಗಿದೆ. ಮೊದಲ ಅಲೆಯಲ್ಲಿ ಆರ್ಟಿಸ್ಟ್ ಕೋವಿಡ್-೧೯ ಪ್ರಕರಣಗಳ ಮತ್ತು ಸಂಬಂಧಿಸಿದ ನಿಯಮಗಳ ಕುರಿತು ನಿರ್ವಹಣೆಗೆ ಆರೋಗ್ಯಸೇವಾ ಕಾರ್ಯಕರ್ತರ ತರಬೇತಿಯನ್ನು ಪ್ರಮುಖ ರಾಜ್ಯಗಳಲ್ಲಿ ಕೈಗೊಂಡಿತ್ತು.
ಅದೇ ರೀತಿಯಲ್ಲಿ ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲು ಫನ ಕೋವಿಡ್-೧೯ ಕ್ಲಿನಿಕಲ್ ಮತ್ತು ಗೃಹ ಆಧಾರಿತ ಆರೈಕೆ ಮಾರ್ಗಸೂಚಿಗಳನ್ನು ವಿಶ್ವಾಸಾರ್ಹ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ನಿಶ್ಚಿತ ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ವೆಚ್ಚ ಉಳಿಸುವ ಚಿಕಿತ್ಸೆಗಳನ್ನು ಅಭಿವೃದ್ಧಿ ಮಾಡಲು ಮತ್ತು ಸಂವಹನ ನಡೆಸಲು ಆದ್ಯತೆ ನೀಡಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ಅಪಾರ ಒತ್ತಡವಿರುವುದರಿಂದ ನಿರ್ಧಾರ ಕೈಗೊಳ್ಳುವುದು ಬಹಳ ಸಂಕೀರ್ಣವಾಗಿರುತ್ತದೆ. ಅದು ಹಲವು ಪಾಲುದಾರರನ್ನು ಒಳಗೊಂಡ ಮತ್ತು ದೋಷಯುತ, ಅನಿಶ್ಚಿತ ಮತ್ತು ಸಮೀಪದ ಅಥವಾ ವಿರಳವಾದ ಮಾಹಿತಿಯ ಮೇಲೆ ವಿಶ್ವಾಸವಿರಿಸಬೇಕಾಗುತ್ತದೆ. ನಾವು ನಂತರದ ಅಲೆಗಳ ತೊಂದರೆಗಳಿಗೆ ಒಡ್ಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಪ್ರಾರಂಭಿಕ ರೋಗಪತ್ತೆ ಮತ್ತು ಸನ್ನದ್ಧತೆಯು ಮರಣಗಳನ್ನು ಮತ್ತು ವಿಸ್ತಾರ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ತಪ್ಪಿಸಲು ಮುಖ್ಯವಾಗಿದ್ದು ಫನ ಈ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಡಾ. ಹೇಮಾ ಹೇಳಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಡಾ. ಹೇಮಾ ದಿವಾಕರ್
ಫನದ ೩ನೇ ಅಲೆಯ ಸನ್ನದ್ಧತೆಯ ಉಪ ಸಮಿತಿಯ ಅಧ್ಯಕ್ಷರು
ಕನ್ಸಲ್ಟೆಂಟ್ ಅಬ್ಗೈನ್ ಮತ್ತು ಮೆಡಿಕಲ್ ಡೈರೆಕ್ಟರ್
ದಿವಾಕರ್ಸ್ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು
ಫೊಗ್ಸಿ ೨೦೧೩ರ ಅಧ್ಯಕ್ಷರು ಎಐಸಿಒಜಿ ೨೦೧೯ರ ಸಂಘಟನಾ ಅಧ್ಯಕ್ಷರು
ಸಿಇಒ- ಆರ್ಟಿಸ್ಟ್ (ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ಫರ್)
ಫೊಗ್ಸಿ ಅಂಬಾಸಡರ್ ಟು ಫಿಗೊ (ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಗೈನಲಾಜಿಸ್ಟ್ಸ್ ಅಂಡ್ ಅಬ್ಸ್ಟೆಟ್ರಿಷಿಯನ್ಸ್)
ಮೊಬೈಲ್: 9844046724 | Email: [email protected]
ಅಥವಾ
ಡಾ. ಪ್ರಸನ್ನ ಎಚ್.ಎಂ.
ಫನ ಅಧ್ಯಕ್ಷ
ಮೊಬೈಲ್: 9845005060 | Email: [email protected]
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ