Latest

ಶುಲ್ಕ ಪಾವತಿ: ಖಾಸಗಿ ಶಾಲೆಗಳ ಪಟ್ಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವಿನ ಜಟಾಪಟಿ ನಡುವೆ ಇದೀಗ ಖಾಸಗಿ ಶಾಲೆಗಳು ಪೋಷಕರಿಗೆ ಶಾಕ್ ನೀಡಿದ್ದು, ಫೀಸ್ ಕಟ್ಟಲೇ ಬೇಕು. ಯಾವುದೇ ವಿನಾಯಿತಿ ಇಲ್ಲ ಎಂದು ಖಡಕ್ ಸೂಚನೆ ನೀಡಿದೆ.

ಈ ಕುರಿತು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದು, ಪೋಷಕರು ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿ ಮಾಡಲೇಬೇಕು. ಕಳೆದ ವರ್ಷದ ಶುಲ್ಕ ಕೂಡ ಬಾಕಿಯಿದೆ. ನಾವು ಶಾಲಾ ಸಿಬ್ಬಂದಿಗಳಿಗೂ ಸಂಬಳ ನೀಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.

700 ಕೋಟಿ ರೂಪಾಯಿ ಆರ್ ಟಿಇ ಹಣ ಬಾಕಿ ಉಳಿದಿದೆ. ಕಳೆದ 6 ತಿಂಗಳಿಂದ ಹಣವೇ ಬಂದಿಲ್ಲ. ಶೇ.20ರಷ್ಟು ಮಕ್ಕಳು ಕೂಡ ದಾಖಲಾಗುತ್ತಿಲ್ಲ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವಂತೆ ಸರ್ಕಾರ ನಿರ್ದೇಶನ ನೀಡಬೇಕು. ಎಲ್ಲಾ ಪೋಶಕರಿಗೂ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬುದನ್ನು ನಾವು ಒಪ್ಪುವುದಿಲ್ಲ. ಪೋಷಕರಿಗೆ ತಮಗೆ ಅಗತ್ಯವಿರುವುದನ್ನು ಖರೀದಿಸಲು, ಬಿಲ್ ಗಳನ್ನು ಪಾವತಿಸಲು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲ ಎಂದರೆ ಹೇಗೆ? ನಾವು ಒಮ್ಮೆಲೇ ಶುಲ್ಕ ಪಾವತಿಸಿ ಎಂದು ಸೂಚಿಸುತ್ತಿಲ್ಲ. ಕಂತುಗಳಲ್ಲಿ ಶುಲ್ಕ ಪಾವತಿ ಮಾಡಲು ಅವಕಾಶ ಕೊಡುತ್ತಿದ್ದೇವೆ ಎಂದು ಹೇಳಿದರು.
ಶಿಕ್ಷಣ ಸಚಿವರಿಗೆ ಪೋಷಕರು-ವಿದ್ಯಾರ್ಥಿಗಳ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button