GIT add 2024-1
Kore@40
Beereshwara 33

*ಏಪ್ರಿಲ್ 18ಕ್ಕೆ ನಾಮಪತ್ರ ಸರಳ ರೀತಿಯಲ್ಲಿ ಸಲ್ಲಿಸುತ್ತೇನೆ: ಪ್ರಿಯಂಕಾ ಜಾರಕಿಹೊಳಿ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಕಾರಣ ತಾವೆಲ್ಲರೂ ಸಹಕರಿಸಬೇಕು ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ.

Emergency Service

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಅಂದು ಕೆಲವೇ ಕೆಲವು ಜನಪ್ರತಿನಿಧಿಗಳು ನನಗೆ ಸಾಥ್ ನೀಡಲಿದ್ದಾರೆ. ಸುಡು ಬಿಸಿಲಿನಲ್ಲಿ ಕಾರ್ಯಕರ್ತರು ಹಾಗೂ ಬೃಹತ್ ರ್ಯಾಲಿಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ತಂದೆ, ಲೋಕೋಪಯೋಗಿ ಇಲಾಖೆ ಸಚಿವ ಸತಶ್‌ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಆದ್ದರಿಂದ ತಂದೆಯವರ ಮಾರ್ಗದರ್ಶನದಂತೆ ಸರಳವಾಗಿ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Laxmi Tai add
Bottom Add3
Bottom Ad 2