Kannada News

ಜಿಮ್ ಸಲಕರಣೆ, ಚೆಕ್ ವಿತರಿಸಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನಿ, ಗೆಜಪತಿ, ಧಾಮಣೆ ಎಸ್ ಬಿ ಗ್ರಾಮದಲ್ಲಿ ನೂತನ ಸಮುದಾಯ ಭವನಗಳ ನಿರ್ಮಾಣದ ಸಲುವಾಗಿ ಕೊನೆಯ ಹಂತದ ಚೆಕ್‌ಗಳನ್ನು ಆಯಾ ದೇವಸ್ಥಾನಗಳ ಟ್ರಸ್ಟ್ ಕಮೀಟಿಯವರಿಗೆ ವಿಧಾನ ಪರಿಷತ್ ಸದಸ್ಯ ಟನ್ನರಾಜ ಹಟ್ಟಿಹೊಳಿ ಸೋಮವಾರ ಹಸ್ತಾಂತರಿಸಿದರು.

Home add -Advt

ಇದೇ ಸಮಯದಲ್ಲಿ ಬೆನಕನಹಳ್ಳಿ(ಗಣೇಶಪುರ) ಗ್ರಾಮಕ್ಕೆ ಜಿಮ್ ಸೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಸಹ ವಿತರಿಸಿದರು, ಇದರೊಂದಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಟ್ಟು 25 ಗ್ರಾಮಗಳಿಗೆ ಜಿಮ್ ಸೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಿದಂತಾಗಿದೆ.

ಈ ಸಮಯದಲ್ಲಿ ಮನೋಹರ ಬಾಂಡೇಕರ್, ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.

Related Articles

Back to top button