Cancer Hospital 2
Beereshwara 36
LaxmiTai 5

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮಾದರಿ ಮಾಡಲು ಪ್ರಿಯಾಂಕಾ ಪಣ: ಸತೀಶ್ ಜಾರಕಿಹೊಳಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ರಾಯಬಾಗ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಉತ್ಸಾಹಿ ಯುವಕರಲ್ಲಿ ನಾಯಕತ್ವದ ಗುಣ ಬೆಳೆಸಿ ಅಧಿಕಾರ ನೀಡಿ ಕೆಲಸ ಮಾಡಲು ಬಿಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನೂತನ ಚಿಕ್ಕೋಡಿ‌ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ ಪರ ಸಚಿವ ಸತೀಶ್ ಜಾರಕಿಹೊಳಿ ಅವರು ಮತದಾರರಿಗೆ ಧನ್ಯವಾದಗಳನ್ನು ತಿಳಿಸಿ ನಂತರ ಮಾತನಾಡಿದರು.  ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದಲ್ಲಿ ನಮ್ಮ ವಿರೋಧಿಗಳು ಹಲವು ಗೊಂದಲಗಳನ್ನು ಸೃಷ್ಟಿ ಮಾಡಿದ್ದರು. ಆದರೆ, ಮತದಾರರು ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದರು.

ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಜನರ ಗೆಲುವಾಗಿದೆ, ನಮ್ಮ ಗ್ಯಾರಂಟಿ ಯೋಜನೆ ಒಳ್ಳೆಯ ಪರಿಣಾಮ ಬೀರಿದೆ. ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸಿರುವ  ಪ್ರತಿಯೊಬ್ಬ ಮತದಾರರಿಗೂ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರವನ್ನು ಮಾದರಿಯನ್ನಾಗಿಸಲು ಪ್ರಿಯಾಂಕಾ ಜಾರಕಿಹೊಳಿ ಪಣ ತೊಟ್ಟಿದ್ದಾಳೆ. ಹೀಗಾಗಿ ರಾಯಬಾಗ ಪಟ್ಟಣದಲ್ಲಿ ಒಂದು ಬೃಹತ್ ಸಮಾವೇಶ ಮಾಡೋಣ ಎಂದು ಹೇಳಿದರು.

Emergency Service

ಈ ಸಂದರ್ಭದಲ್ಲಿ ಮಹಾವೀರ ಮೋಹಿತೆ, ಅರ್ಜುನ ನಾಯಿಕವಾಡಿ, ಅಪ್ಪಾಸಾಬ ಕುಲಗುಡೆ, ಸತಾರ ಮುಲ್ಲಾ, ಡಾ. ಎನ್.ಎ.ಮಗದುಮ್ಮ, ಅರ್ಜುನ ಬಂಡಗರ, ಫಾರೂಕ್ ಮೊಮಿನ, ಅಣ್ಣಪ್ಪ ಭೂವಿ, ಮುಜೀಬ್ ಸಯ್ಯದ್, ನಾಮದೇವ ಕಾಂಬಳೆ, ವಾಮನ್ ಹಟ್ಟಿಮನಿ, ಸಂತೋಷ ಶೇಲಾರ, ಹಾಜಿ ಮುಲ್ಲಾ, ರಾವಸಾಬ ಪಾಟೀಲ, ನಿರ್ಮಲಾ ಪಾಟೀಲ ಸೇರಿದಂತೆ ಇತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ಬಹತ್ ಮೆರವಣಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಜಾರಕಿಹೊಳಿ ಅವರು ಗೆಲುವು ಸಾಧಿಸಿದ ನಂತರ ಸಚಿವ ಸತೀಶ್‌ ಜಾರಕಿಹೊಳಿ ಅವರು ಬಾವನಸೌಂದತ್ತಿ ಗ್ರಾಮಕ್ಕೆ ಪ್ರಥಮವಾಗಿ ಆಗಮಿಸಿದ್ದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ತೆರೆದ ವಾಹನ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ, ಬ್ಯಾಂಡ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆಯಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Bottom Add3
Bottom Ad 2