Kannada NewsLatest

ಮತ್ತಿಕೊಪ್ಪದಲ್ಲಿ 1.72 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ

ಪ್ರಗತಿವಾಹಿನಿ ಸುದ್ದಿ, ನೇಸರಗಿ:  ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ದೇಶದ ಎಲ್ಲ ಮನೆ ಮನೆಗಳಿಗೆ ನೀರು ಒದಗಿಸುವ ಜಲ್ ಜೀವನ ಮಿಷನ್ ಯೋಜನೆಯು ಗ್ರಾಮೀಣ ಮಹಿಳೆಯರ ಆಶ್ರಯದ ಯೋಜನೆಯಾಗಿದ್ದು ಇದರ ಸದುಪಯೋಗ ಪಡೆದು ನೀರನ್ನು  ಸದ್ಬಳಕೆ ಮಾಡಿಕೊಳ್ಳಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಸುತಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದಲ್ಲಿ 1.72 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

ಈ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಸರಿಯಾದ ರೀತಿಯಲ್ಲಿ ಸುರಕ್ಷಿತ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಗ್ರಾಮದ ಜನ ಕಾಮಗಾರಿ ನಡೆಯುವಾಗ ಸಲಹೆ ಆದೇಶ ನೀಡಿ ತಮ್ಮ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಚೆನ್ನಾಗಿ ಪಡೆಯಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಎಪಿಎಂಸಿ ನಿರ್ದೆಶಕ ಬಿ.ಎಫ್. ಕೊಳದೂರ, ಎಸ್. ಎಂ. ಪಾಟೀಲ, ಪಿಎಸ್ ಐ.ವೈ. ಎಲ್ ಶೀಗಿಹಳ್ಳಿ, ಗ್ರಾಪಂ ಅಧ್ಯಕ್ಷ ಸೋಮಪ್ಪ ಉಪ್ಪಾರಟ್ಟಿ, ಉಪಾಧ್ಯಕ್ಷ ಬಸವರಾಜ ತುಬಾಕಿ, ಮುಖಂಡರಾದ ಅಡಿವೆಪ್ಪ ಹೊಸಮನಿ, ಮಹಾಂತೇಶ ಮೊಹರೆ, ಪ್ರಕಾಶ ಮೊಹರೆ, ಅಡವಿಸಿದ್ದೇಶ್ವರ ಮಾಜಿ ಸೈನಿಕರ ಸಂಘದ ಅದ್ಯಕ್ಷ ಸೋಮಪ್ಪ ತಕ್ಕುನವರ, ಉಪಾಧ್ಯಕ್ಷ ಕಲ್ಲಪ್ಪ ದೇಯಣ್ಣವರ, ಪ್ರಕಾಶ ಮೊಹರೆ,ಸೋಮಪ್ಪ ದೇಯಣ್ಣವರ,ಶಶಿಧರ ಪಾಟೀಲ, ಪಿಡಿಓ ವನಜಾಕ್ಷಿ ಪಾಟೀಲ,ಈರಸಂಗಯ್ಯ ವಿರಕ್ತಮಠ, ಶಾಂತವ್ವ ದೇಯಣ್ಣವರ, ಲಕ್ಷ್ಮೀ ತಳವಾರ,ಸುವರ್ಣಾ ಜಮಾದಾರ, ಸೋಮಪ್ಪ ಶೇಗುಣಸಿ, ಮಲ್ಲೇಶ ನಾವಲಗಿ,ಮಹೇಶ ಮುಚ್ಚಂಡಿ, ಶಿವಪ್ಪ ಶೇಗುಣಗಿ, ನಿಂಗಣ್ಣ ಚೋಭಾರಿ, ಬಾಬು ಬೂದಿಹಾಳ, ಮಲ್ಲಿಕಾರ್ಜುನ ಶಿಂತ್ರಿ, ಮಲ್ಲೇಶ ಕವಲದ, ರಾಜು ಮುಚ್ಚಂಡಿ, ಮಹಾದೇವ ಲೆಂಕೆನ್ನವರ, ಅಡವಿಸಿದ್ದೇಶ್ವರ ಮಾಜಿ ಸೈನಿಕರ ಸಂಘದ ಸದಸ್ಯರು, ಗ್ರಾಪಂ ಸಿಬ್ಬಂದಿ, ಗ್ರಾಮದ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಬೇನಾಮಿ ಆಸ್ತಿಗಾಗಿ ನಡೆಯಿತಾ ಚಂದ್ರಶೇಖರ್ ಗುರೂಜಿ ಹತ್ಯೆ?

Home add -Advt

Related Articles

Back to top button