Kannada NewsLatest

5 ಗಂಭೀರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಚೆಂಬರ್ ಆಫ್ ಕಾಮರ್ಸ್

10 ರೂ. ನಾಣ್ಯ ನಿರಾಕರಣೆ, 3ನೇ ರೈಲ್ವೆ ಗೇಟ್ ಕಾಮಗಾರಿ ವಿಳಂಬ, ಸುವರ್ಣ ವಿಧಾನಸೌಧದಲ್ಲಿ ಇಂಟರ್ನೆಟ್ ಸಮಸ್ಯೆ, ನಗರದ ಟ್ರಾಫಿಕ್ ಸಮಸ್ಯೆ, RTPCR ಕಡ್ಡಾಯ

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  –  ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬೆಳಗಾವಿಯ ಕೆಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರೋಹನ್ ಜುವಳಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಮನವಿಗಳು ಈ ರೀತಿ ಇವೆ –

  1. ರೂ.10 ನಾಣ್ಯಗಳನ್ನು ಸಾರ್ವಜನಿಕರು ಸ್ವೀಕರಿಸದ  ಬಗ್ಗೆ  

ಬೆಳಗಾವಿಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಿಗಳು 10 ರೂ. ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಈಗ 10 ರೂ. ನೋಟಿನ ಕೊರತೆಯಿದ್ದು, ಜನರು ನಾಣ್ಯವನ್ನು ಸ್ವೀಕರಿಸುವಂತೆ ಕ್ರಮವಾಗಬೇಕಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದರೂ ಬೆಳಗಾವಿಯಲ್ಲಿ ಅವುಗಳನ್ನು ತಿರಸ್ಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಬೇಕು.

 

2) 3ನೇ ರೈಲ್ವೇ ಗೇಟ್ ಓವರ್ ಬ್ರಿಡ್ಜ್  ಸಮಸ್ಯೆ.

ಸಂಸದರಾದ ಮಂಗಳಾ ಅಂಗಡಿ ಅವರು ರೈಲ್ವೇ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಜೊತೆ 3ನೇ ರೈಲ್ವೆ ಗೇಟ್‌  ಪ್ರಗತಿಯ ಬಗ್ಗೆ ಚರ್ಚಿಸಲು ಜಂಟಿ ಪರಿಶೀಲನೆ ಮತ್ತು ಸಭೆಯನ್ನು ನಡೆಸಿದರು. ಅಕ್ಟೋಬರ್ ತಿಂಗಳಲ್ಲಿ ನಡೆದ ಈ ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜನವರಿ 31, 2022 ರ ಮೊದಲು ರೈಲ್ವೆ ಮೇಲ್ಸೇತುವೆ ಕೆಲಸ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದರು.

ಆದರೆ ಇಂದಿನವರೆಗೂ ಯಾವುದೇ ಪ್ರಗತಿಯಾಗಿಲ್ಲ,  ಇನ್ನೂ 6 ರಿಂದ 8 ತಿಂಗಳ ಸಮಯ ತೆಗೆದುಕೊಳ್ಳುವಂತೆ ಕಾಣುತ್ತಿದೆ.  ಗೋವಾ ರಾಷ್ಟ್ರೀಯ ಹೆದ್ದಾರಿ ಮತ್ತು ಬೆಳಗಾವಿಯ ಪ್ರಮುಖ ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ಬಗ್ಗೆ ನಮ್ಮ ಸದಸ್ಯರು ಮತ್ತು ನಾಗರಿಕರಿಂದ ಭಾರಿ ಒತ್ತಡವಿದೆ. ದಿನದಿಂದ ದಿನಕ್ಕೆ ಭಾರಿ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. 2022 ರ ಜನವರಿ 31 ರೊಳಗೆ ಪೂರ್ಣಗೊಳಿಸದಿದ್ದರೆ ನಾವು ಸಾರ್ವಜನಿಕರೊಂದಿಗೆ 3 ನೇ ರೈಲ್ವೇ ಗೇಟ್ ಎದುರು ಪ್ರತಿಭಟನೆಗೆ ಧರಣಿ ನಡೆಸುವುದಾಗಿ ನಾವು ಕಳೆದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ.

ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಮತ್ತು ಕೆಲಸವನ್ನು ಪೂರ್ಣಗೊಳಿಸಲು 3 ನೇ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಜಂಟಿ ಸಭೆಯನ್ನು ಕರೆಯಬೇಕು.

 

3) ಮಾರುಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ 

ಪೊಲೀಸ್ ಇಲಾಖೆಯು ನಗರದಲ್ಲಿನ ಹೆಚ್ಚಿನ ಪ್ರದೇಶಗಳನ್ನು ನೋ ಪಾರ್ಕಿಂಗ್ ಝೋನ್ ಆಗಿ ಜಾರಿಗೊಳಿಸಿದೆ, ಇದರಿಂದಾಗಿ ಸಾರ್ವಜನಿಕರು ವಾಹನ ನಿಲುಗಡೆಗೆ ಭಾರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಗ್ರಾಹಕರು ಕೊಲ್ಲಾಪುರ ಮತ್ತು ಗೋವಾದಿಂದ ಆಗಮಿಸುತ್ತಾರೆ. ಕೆಎಲ್‌ಇ ಆಸ್ಪತ್ರೆಯಿಂದ ಉದ್ಯಮಬಾಗದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ.

ಬೆಳಗಾವಿ ನಗರದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಭೆಯನ್ನು ಏರ್ಪಡಿಸಬೇಕು. ಸಧ್ಯಕ್ಕೆ ಸರ್ದಾರ್ ಗ್ರೌಂಡ್ ಮತ್ತು ನಗರದ ಪ್ರದೇಶದಲ್ಲಿ ಲಭ್ಯವಿರುವ ಖಾಲಿ ಮೈದಾನಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಬೇಕು.

4) ಸುವರ್ಣ ವಿಧಾನಸೌಧದಲ್ಲಿ ಇಂಟರ್ನೆಟ್ ಸಂಪರ್ಕ ಸಮಸ್ಯೆ

ಸರಕಾರದಿಂದ ನೀಡಲಾಗುತ್ತಿರುವ ಇಂಟರ್‌ನೆಟ್‌ ಸೌಲಭ್ಯ ತೀರಾ ಕಡಿಮೆಯಿದ್ದು, ಇದರಿಂದ ಸರಕಾರಿ ಕೆಲಸಗಳು ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದಿವೆ.

ಸುವರ್ಣ ವಿಧಾನಸೌಧದಲ್ಲಿ ಹೈಸ್ಪೀಡ್ ಇಂಟರ್‌ನೆಟ್‌ನೊಂದಿಗೆ FIBER ಸಂಪರ್ಕವನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು.

5.  ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಲು RTPCR  ಕಡ್ಡಾಯ ಹಿಂಪಡೆಯಬೇಕು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button