Kannada NewsKarnataka NewsLatest

ಪ್ರೊ. ಜ್ಯೋತಿ ಹೊಸೂರ್ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆಗಿದ್ದ ಪ್ರೊ.ಜ್ಯೋತಿ ಹೊಸೂರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.

ಪ್ರೊ.ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ಗಾದೆ, ಒಡಪು, ಗ್ರಾಮದೇವತೆ ಅವರು ಮಾಡಿದ ಸಂಶೋಧನೆಗಳು, ವಿದ್ವತ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ರಾಯಬಾಗದಂತಹ ಸಣ್ಣ ಹಳ್ಳಿಯಲ್ಲಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು.

ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಅವರು ಕಾಲಗತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣಾ, ಕಿತ್ತೂರು ಚನ್ನಮ್ಮ, ಕನಕದಾಸ, ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಸಂಶೋಧಕ ಪ್ರಶಸ್ತಿ ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಹಾಗೂ ಕೆ.ಎಲ್.ಇ.ಆಸ್ಪತೆಗೆ ದೇಹದಾನ ಮಾಡುತ್ತಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸರಜೂ ಕಾಟ್ಕರ್, ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ,  ಮೋಹನ ಬ ಪಾಟೀಲ, .ಬಿ ಎ ಸನದಿ, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ರಾಮಕೃಷ್ಣ ಮರಾಠೆ ಹಾಗೂ ಪದಾಧಿಕಾರಿಗಳಾದ ಎಂ ವೈ ಮೆನಸಿನಕಾಯಿ,  ಸಿ ಎಂ ಬೂದಿಹಾಳ,  ಎ ಎ ಸನದಿ, ಶ್ರೀ.ಬಿ ಎಫ್ ಕಲ್ಲನ್ನವರ, ಡಾ.ಎ ಎಲ್ ಪಾಟೀಲ, ಡಾ.ಬಿ ಜೆ ಧಾರವಾಡ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

ರಾಜ್ಯದಲ್ಲಿಯೇ ಮೊದಲು; ಪವರ್ ಸ್ಟಾರ್ ಪುನೀತ್ ಕಣ್ಣುಗಳು ನಾಲ್ವರಿಗೆ ಅಳವಡಿಕೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button