Belagavi NewsBelgaum NewsKannada NewsKarnataka NewsLatest

*ಪ್ರೊ. ಎಂ.ಡಿ ನಾಗಣ್ಣವರ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಭಾವುರಾವ್ ಕಾಕತಕರ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರ ವಿಷಯದ ಅಧ್ಯಾಪಕರಾಗಿದ್ದ ಪ್ರೊ. ಎಂ ಡಿ ನಾಗಣ್ಣವರ ಗುರುವಾರ ಮುಂಜಾನೆ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ವಿದ್ಯಾರ್ಥಿಪ್ರಿಯ ಶಿಕ್ಷಕರೆಂದೇ ಖ್ಯಾತಿ ಯಾಗಿದ್ದ ಪ್ರೊ ನಾಗಣ್ಣವರ ನಿವೃತ್ತಿಯ ನಂತರ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರು ಪತ್ನಿ, ಎರಡು ಗಂಡು ಮತ್ತು ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ.

ಮೃತರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ವಿಜಯಕುಮಾರ ನಾಗಣ್ಣವರ ಅವರ ಚಿಕ್ಕಪ್ಪ. ಮೃತರ ಅಂತ್ಯಕ್ರಿಯೆಯು ಸಾಂಬ್ರಾದ ಸ್ಮಶಾನ ಭೂಮಿಯಲ್ಲಿ ಮಧ್ಯಾಹ್ನ ನೇರವೇರಲಿದೆ.


Home add -Advt

Related Articles

Back to top button