Kannada NewsKarnataka News

ಕೆಎಲ್‌ಎಸ್  ಜಿಐಟಿಯಲ್ಲಿ  ಜು.6ರಂದು ಪ್ರಾಜೆಕ್ಟ್ ಪ್ರದರ್ಶನ  ಮೇಳ  

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ  ಜುಲೈ 6 ರಂದು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟಗಳ ಪ್ರದರ್ಶನ ‘ಪ್ರಾಜೆಕ್ಟ್ ಎಕ್ಸ್‌ಪೋ-2022’  ಆಯೋಜಿಸಿದೆ.

ಬೆಳಗಾವಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್. ಅವರು  ಪ್ರದರ್ಶನ ಮೇಳ ಉದ್ಘಾಟಿಸಲಿದ್ದಾರೆ.

ಪ್ರಾಜೆಕ್ಟ್ ಎಕ್ಸ್‌ಪೋ-2022 ಐಒಟಿ, ಪಿಎಲ್‌ಸಿ, ಇಂಧನ ಸಂರಕ್ಷಣೆ, ವಿದ್ಯುತ್ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಮಷೀನ್ ಲರ್ನಿಂಗ್, ವೆಬ್ ತಂತ್ರಜ್ಞಾನಗಳು, ಯಂತ್ರ ವಿನ್ಯಾಸ, ಉತ್ಪಾದನೆ, ಥರ್ಮಲ್ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ, ಕೃಷಿ, ಸ್ಟ್ರಕ್ಚರಲ್ ಎಂಜಿನಿಯರಿಂಗ್, ನಿರ್ಮಾಣ ಸಾಮಗ್ರಿಗಳು ಮತ್ತು ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾರಿಗೆ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನ, ಉಪಗ್ರಹ ಚಿತ್ರ ಸಂಸ್ಕರಣೆ ಮತ್ತು ಇನ್ನೂ ವಿವಿಧ ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಬಳಸಿ, ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 250 ಕ್ಕೂ ಹೆಚ್ಚು ಪ್ರಾಜೆಕ್ಟ್  ಗಳನ್ನು ಪ್ರದರ್ಶಿಸಲಾಗುವುದು.

ಈ ಪ್ರದರ್ಶನ ಬೆಳಗಾವಿ ಮತ್ತು ಸುತ್ತಮುತ್ತಲಿನ ಡಿಪ್ಲೊಮಾ ಕಾಲೇಜುಗಳು, ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಮತ್ತು ಪೋಷಕರಿಗೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ತೆರೆದಿರುತ್ತದೆ ಎಂದು ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲ ಡಾ. ಜಯಂತ್ ಕೆ.ಕಿತ್ತೂರ ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಶ್ರೀಕುಮಾರ್ ಗೆ ನ್ಯಾಯಾಂಗ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button