ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಲ್ಯಾಣ ಕರ್ನಾಟಕದ 9 ಸೇರಿದಂತೆ ರಾಜ್ಯದ 81 ವಲಯ ಅರಣ್ಯಾಧಿಕಾರಿಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಪದೋನ್ನತಿ ನೀಡಿ ಸರಕಾರ ಆದೇಶ ಹೊರಡಿಸಿದೆ.
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ:
ಇದರಲ್ಲಿ, ಬೆಳಗಾವಿ ಜಿಲ್ಲೆಯ ವಿವಿಧ ವಲಯಗಳಲ್ಲಿ ಆರ್. ಎಫ್.ಒ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ವಲಯ ಅರಣ್ಯ ಅಧಿಕಾರಿಗಳಿಗೆ ಅರಣ್ಯ ಮತ್ತು ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಗೊಳಿಸಿದ್ದು, ಈ ಕುರಿತು ಆ.೭ರಂದು ಆದೇಶ ಹೊರಡಿಸಿದೆ.
ಪ್ರಸ್ತುತ ಖಾನಾಪುರ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ ಬಾಳೇಹೊಸೂರ ಅವರನ್ನು ಬೆಳಗಾವಿ ಎ.ಸಿ.ಎಫ್ ಹುದ್ದೆಗೆ, ಈ ಹಿಂದೆ ಭೀಮಗಡ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶಿವಾನಂದ ಮಗದುಮ್ ಅವರನ್ನು ನಾಗರಗಾಳಿ ಎ.ಸಿ.ಎಫ್ ಹುದ್ದೆಗೆ, ಖಾನಾಪುರ ಮತ್ತು ಲೋಂಡಾ ವಲಯ ಅರಣ್ಯಾಧಿಕಾರಿಯಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ಸಧ್ಯ ನೇಸರಗಿ ಆರ್.ಎಫ್.ಒ ಎಂದು ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ವಾಳದ ಅವರನ್ನು ಎ.ಸಿ.ಎಫ್ ಬೆಳಗಾವಿ (ಕಾರ್ಯ ಯೋಜನೆ) ಹುದ್ದೆಗೆ, ಗೋಲಿಹಳ್ಳಿ ಮತ್ತು ಕೆ.ಎಫ್.ಡಿ.ಸಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀನಾಥ ಕಡೋಲ್ಕರ ಅವರನ್ನು ಎ.ಸಿ.ಎಫ್ ಹಾವೇರಿ ಹುದ್ದೆಗೆ, ಖಾನಾಪುರ ಮತ್ತು ಕಣಕುಂಬಿ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸಧ್ಯ ಗೋಕಾಕ ಲೀಗಲ್ ಮತ್ತು ಐಸಿಟಿ ಹುದ್ದೆಯಲ್ಲಿದ್ದ ಕವಿತಾ ಈರನಟ್ಟಿ ಅವರನ್ನು ಎ.ಸಿ.ಎಫ್ ಬೆಳಗಾವಿ (ಅರಣ್ಯ ಸಂಚಾರಿ ದಳ) ಹುದ್ದೆಗೆ, ಲೋಂಡಾ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿದ್ದು, ಈಗ ಮೈಸೂರು ಜಿಲ್ಲೆಯಲ್ಲಿ ಸೇವೆಯಲ್ಲಿದ್ದ ನಾಗರಾಜ ಭೀಮಗೋಳ ಅವರನ್ನು ಎ.ಸಿ.ಎಫ್ ರಾಯಬಾಗ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ