Belagavi NewsBelgaum NewsKannada NewsKarnataka News

ಆಸ್ತಿ ವಿವಾದ: ಚಿಕ್ಕಪ್ಪನನ್ನೇ ಕೊಂದ ಪಾಪಿ ಮಗ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದಬದಬಹಟ್ಟಿ ಗ್ರಾಮದಲ್ಲಿ ಚಿಕ್ಕಪ್ಪನನ್ನೇ ಕೊಂದಿರುವ ಭೀಕರ ಘಟನೆ ನಡೆದಿದೆ. 

ಕೇಶವ್ ಬೋಸಲೆ(47) ಕೊಲೆಯಾದ ದುರ್ದೈವಿ. ಮಗ ಖಂಡೋಬಾ ಕೊಲೆ ಆರೋಪಿ. ಮೇ 10 ರಂದು ಗ್ರಾಮದಲ್ಲಿ ವಿಠಲ ದೇವರ ಸಪ್ತಾಹ ನಡೆದು ಎಲ್ಲರೂ ಕೆಲಸದಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಧ್ಯಾಹ್ನ ಚಿಕ್ಕಪ್ಪ ಕೇಶವ್‌ಗೆ ಮಗ ಖಂಡೋಬಾ ಎಣ್ಣೆ ಹೊಡೆಯಲು ಕೊಕಟನೂರ ಗ್ರಾಮದ ಬಳಿ ಇರುವ ದಾಬಾಗೆ ಕರೆದೊಂಡು ಹೋಗಿದ್ದ. ಚಿಕ್ಕಪ್ಪ ಮತ್ತು ಮಗ ಇಬ್ಬರು ಸೇರಿಕೊಂಡು ಕಂಠಪೂರ್ತಿ ಕುಡಿದಿದ್ದಾರೆ. ಕುಡಿದು ಇಬ್ಬರ ನಡುವೆ ಜಗಳ ಶುರು ಆಗಿದೆ.  ಖಂಡೋಬಾ ಕುಡಿದ ಅಮಲಿನಲ್ಲಿ ಅಲ್ಲೇ ಪಕ್ಕದಲ್ಲೇ ಇದ್ದ ಕಲ್ಲನ್ನು ತೆಗೆದುಕೊಂಡು ಕೇಶವ್ ತಲೆ ಮೇಲೆ ಎತ್ತಿ ಹಾಕಿದ್ದಾನೆ. ಇದರಿಂದ ಕುಸಿದು ಕೆಳಗೆ ಬಿದ್ದ ಕೇಶವ್ ಸ್ಥಳದಲ್ಲೇ ಜೀವ ಬಿಟ್ಟಿದ್ದಾನೆ.

ಇನ್ನು ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಐಗಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಹಾಗೂ ಆರೋಪಿ ಖಂಡೋಬಾಗೂ ಬಂಧಿಸಿ ತನಿಖೆ ಕೈಗೊಂಡಿದ್ದಾರೆ. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button